ಜಿಲ್ಲೆ

80 ಸಾವಿರ ರೂ. ಮೌಲ್ಯದ ಎರಡು ಎತ್ತುಗಳ ಕಳ್ಳತನ

Haveri - Kariyappa Aralikatti

ರಟ್ಟಿಹಳ್ಳಿ: ಮನೆ ಮುಂದೆ ಕಟ್ಟಿದ್ದ 80 ಸಾವಿರ ರೂ. ಮೌಲ್ಯದ ಎರಡು ಎತ್ತುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ಸೋಮವಾರ ರಾತ್ರಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸಪ್ಪ ತಿರಕಪ್ಪ ಕಿಚಡಿ (63) ಎಂಬುವರ ಎತ್ತುಗಳು ಕಳ್ಳತನವಾಗಿರುವುದು.
ಇವರು ಮನೆ ಮುಂದೆ ಕಟ್ಟಿದ್ದ ಎತ್ತುಗಳನ್ನು ಯಾರೋ ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.