ಗೌರಿಬಿದನೂರು ತಾಲೂಕಿನ ನಕ್ಕಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ಕೆ.ನಾಗಭೂಷಣ ರಾವ್​ ಮಾತನಾಡಿದರು. Nagaragere ZP constituency is reserved for SC.
ಚಿಕ್ಕಬಳ್ಳಾಪುರ

ನಗರಗೆರೆ ಜಿಪಂ ಕ್ಷೇತ್ರ ಎಸ್ಸಿ ಮೀಸಲು |Nagaragere ZP constituency is reserved for SC.

ತಾಲೂಕಿನ ನಕ್ಕಲಹಳ್ಳಿಯಲ್ಲಿ ನಕ್ಕಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು.

  • ಎನ್​ಡಿಎ ಮೈತ್ರಿಯಲ್ಲಿ ಬಿಜೆಪಿಗೆ ಪಡೆಯಲು ಪಣ

  • ನಕ್ಕಲಹಳ್ಳಿ ಬಿಜೆಪಿ ಕಾರ್ಯಕರ್ತರ ಸಭೆ

ಗೌರಿಬಿದನೂರು:ತಾಲೂಕಿನ ನಕ್ಕಲಹಳ್ಳಿಯಲ್ಲಿ ನಕ್ಕಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು.

ಸಭೆಯಲ್ಲಿ ಸಂಟನೆ, ಬೂತ್​ ಮಟ್ಟದ ಸಿದ್ಧತೆ ಹಾಗೂ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆಯಾಯಿತು.ಈ ಬಾರಿ ನಗರಗೆರೆ ಜಿಪಂ ೇತ್ರವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲು ನಿಗದಿಯಾಗಿದ್ದು, ಈ ೇತ್ರವನ್ನು ಎನ್​ಡಿಎ ಮೈತ್ರಿಕೂಟದಲ್ಲಿ ಬಿಜೆಗೆ ಪಡೆದುಕೊಳ್ಳಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ಬಿಜೆಪಿ ಜಿಲ್ಲಾ ಖಜಾಂಚಿ ಹಾಗೂ ದಿಶಾ ಸಮಿತಿ ಸದಸ್ಯ ಕೆ.ನಾಗಭೂಷಣ ರಾವ್​ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್​ಗೆ ತನ್ನದೇ ಆದ ಇತಿಹಾಸವಿದೆ. ತಾಲೂಕಿನಲ್ಲಿ ಮತದಾರರು ಗಟ್ಟಿಯಾಗಿ ನೆಲೆಯೂರಿದ್ದಾರೆ. ದೇಶವನ್ನು ಕಾಪಾಡಲು, ಭದ್ರತೆ ಮತ್ತು ಅಭಿವೃದ್ಧಿಗಾಗಿ ಎಲ್ಲ ವರ್ಗದ ಜನರು, ಯುವಕರು ಬಿಜೆಪಿಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ.ಬೂತ್​ ಮಟ್ಟದಲ್ಲಿ ಪಕ್ಷವನ್ನು ಸಂಟನೆ ಮಾಡಿದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯ. ಕಾರ್ಯಕರ್ತರು ಈಗಿನಿಂದಲೇ ಸಕ್ರಿಯರಾಗಬೇಕು ಎಂದು ಕರೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೂರ್ಡಿಲಪ್ಪ ಮಾತನಾಡಿ, ನಗರಗೆರೆ ಜಿಲ್ಲಾ ಪಂಚಾಯಿತಿ ಭಾಗದಲ್ಲಿ ಪಕ್ಷದ ನೆಲೆ ಭದ್ರವಾಗಿದೆ. ಪರಿಶಿಷ್ಟ ಜಾತಿ ಮೀಸಲು ೇತ್ರದಲ್ಲಿ ಜನಪರ, ಸಂಟನಾ ಚತುರ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ನಿಶ್ಚಿತ. ಎನ್​ಡಿಎ ಮೈತ್ರಿ ಧರ್ಮದಂತೆ ಈ ೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವಂತೆ ಜೆಡಿಎಸ್​ ವರಿಷ್ಠರ ಮನವೊಲಿಸಲಾಗುವುದು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಕೆ.ರಾಜು ಮಾತನಾಡಿ, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ನಕ್ಕಲಹಳ್ಳಿ ಭಾಗದಲ್ಲಿ ಪಕ್ಷ ಸಂಟನೆಗೆ ಹಗಲಿರುಳು ಶ್ರಮಿಸಿದ್ದೇನೆ. ನಗರಗೆರೆ ಜಿಪಂ ೇತ್ರ ಎಸ್ಸಿ ಮೀಸಲು ಆಗಿರುವುದರಿಂದ ಪಕ್ಷ ನಿಷ್ಠಾವಂತರಿಗೆ, ನೆಲಮಟ್ಟದ ಕಾರ್ಯಕರ್ತರಿಗೆ ಟಿಕೆಟ್​ ನೀಡಬೇಕು. ಕಾರ್ಯಕರ್ತರ ಭಾವನೆಗೆ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಮುಖಂಡರಾದ ಜಯರಾಮ್​ ರೆಡ್ಡಿ,

ಚಿಕ್ಕನಾರಾಯಣಪ್ಪ, ಡೈರಿ ಶಿವು, ಗಂಗಾಧರ್​ ಗೌಡ, ರಮೇಶ್​, ರು, ಬೂತ್​ ಅಧ್ಯಕ್ಷರು, ಶಕ್ತಿ ಕೇಂದ್ರ ಪ್ರಮುಖರು, ಯುವ ಮೋರ್ಚಾ ಪದಾಧಿಕಾರಿಗಳು ಇದ್ದರು.