ಕೃಷ್ಣರಾಜಪುರದಲ್ಲಿ ಯುವಕ ಆತ್ಮಹತ್ಯೆ
- ಜಿಗುಪ್ಸೆಗೊಂಡ ಯುವಕನೋರ್ವ ಮಂಗಳವಾರ ನೇಣಿಗೆ ಶರಣು
- ತಾಲೂಕಿನ ಕೃಷ್ಣರಾಜಪುರದ ಧನುಷ್ (24) ಮೃತ
- ಧನುಷ್ ಫಾಮ್ರ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ
ಚಿಂತಾಮಣಿ: ಜಿಗುಪ್ಸೆಗೊಂಡ ಯುವಕನೋರ್ವ ಮಂಗಳವಾರ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಕೃಷ್ಣರಾಜಪುರದ ಧನುಷ್ (24) ಮೃತ. ಮಾಲೂರಿನ ಸೋದರ ಮಾವನ ಮನೆಯಲ್ಲಿ ವಾಸವಾಗಿದ್ದ ಧನುಷ್ ಫಾಮ್ರ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ, ಶನಿವಾರ ಗ್ರಾಮಕ್ಕೆ ಬಂದಿದ್ದು, ಗ್ರಾಮದ ಹೊರವಲಯದ ಮರಕ್ಕೆ ಮಂಗಳವಾರ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.ಸಮೀಪದ ತೋಟದ ನಿವಾಸಿಗಳು ಬೈಕ್ ನಿಂತಿರುವುದನ್ನು ಕಂಡು ಗಮನಿಸಿದಾಗ ವಿಷಯ ತಿಳಿದಿದೆ. ಕೂಡಲೇ ಮನೆಯವರಿಗೆ, ಗ್ರಾಮಾಂತರ ಠಾಣೆ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ತಂದೆ ಶ್ರೀನಿವಾಸ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.