- ಒಂಟಿ ಮಹಿಳೆ ಮೇಲೆ ಹಲ್ಲೆ
- ಮನೆಯಲ್ಲಿ ಕಳವಾದ ಚಿನ್ನಾಭರಣ ಎಷ್ಟು ಬಗ್ಗೆಯೂ ಅನುಮಾನ
- ದುಷ್ಕರ್ಮಿಗಳು ಯಾರು?
ಶಿಡ್ಲಟ್ಟ: ನಗರದ ದಿಬ್ಬೂರಹಳ್ಳಿ ಮಾರ್ಗದ ಇಲಾಹಿನಗರದ ಮನೆಯಲ್ಲಿ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಲಾಗಿದೆ ಎನ್ನಲಾಗಿದೆ. ನಗರದ ವಾಸಿ ಮುಬಾರಕ್ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮುಬಾರಕ್ ಗೊಂದಲದ ಹೇಳಿಕೆ ನೀಡಿದ ಕಾರಣ
ದುಷ್ಕರ್ಮಿಗಳು ಯಾರು? ಮನೆಯಲ್ಲಿ ಕಳವಾದ ಚಿನ್ನಾಭರಣ ಎಷ್ಟು ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಕೌಟುಂಬಿಕ ಕಲಹ ಕಾರಣಕ್ಕೆ ಮಕ್ಕಳೊಂದಿಗೆ ಬೇರೆಯಾಗಿ ವೃದ್ಧ ಪತಿ ಮತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಒಮ್ಮೆ ಬಂಧುಗಳ ಮೇಲೆ, ಇನ್ನೊಮ್ಮೆ ಇನ್ನಾರ ಮೇಲೋ ಅನುಮಾನ ವ್ಯಕ್ತಪಡಿಸಿ ಮುಬಾರಕ್ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಜತೆಗೆ ಮನೆಯಲ್ಲಿ 3 ಕೆಜಿಯಷ್ಟು ಚಿನ್ನಾಭರಣ ಕಳವಾಗಿದೆ ಎಂದು ಹೇಳಿದ್ದು, ಇದನ್ನು ಆಕೆಯ ಮಕ್ಕಳೇ ಒಪ್ಪುತ್ತಿಲ್ಲ. ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಕುಶಲ್ ಚೌಕ್ಸೆ
ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.