ನಂದಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿಯ ದೃಶ್ಯ 
ಚಿಕ್ಕಬಳ್ಳಾಪುರ

ಪ್ರವಾಸಿತಾಣ ನಂದಿ ಬೆಟ್ಟದಲ್ಲಿ ವ್ಯಾಪಕವಾಗಿ ಹರಡಿದ ಕಾಡ್ಗಿಚ್ಚು

ಚಿಕ್ಕಬಳ್ಳಾಪುರ: ಬೇಸಿಗೆಯ ಕಾಡ್ಗಿಚ್ಚಿನ ಸಮಸ್ಯೆಯ ತಲೆ ನೋವು ಕಾಡಲಾರಂಭಿಸಿದ್ದು ನಂದಿ ಗಿರಿಧಾಮದ ಒಂದು ಬದಿಯಲ್ಲಿ ಮಂಗಳವಾರ ರಾತ್ರಿ ಬೆಂಕಿ ಜ್ವಾಲೆಗೆ ಗಿಡಗಳು ಸುಟ್ಟು ಭಸ್ಮವಾಗಿವೆ.
ಇತ್ತೀಚೆಗಿನ ದಿನಗಳಲ್ಲಿ ಉಷ್ಣಾಂಶವು ನಿರಂತರವಾಗಿ ಏರಿಕೆಯಾಗುತ್ತಿರುವುದರ ನಡುವೆ ಬೆಟ್ಟದ ತಪ್ಪಲು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹುಲ್ಲುಗಾವಲುಗಳು ಒಣಗಿದ ರೀತಿಯಲ್ಲಿ ಕಾಣಿಸುತ್ತಿವೆ. ಎಲೆಗಳು ಉದುರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ಕಾಡ್ಗಿಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಸುಲ್ತಾನ್‌ ಪೇಟೆ ಮಾರ್ಗದ ನಂದಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡು ಹರಡಿದೆ. ತಳಮಟ್ಟದಿಂದ ಮೇಲ್ಮಟ್ಟಕ್ಕೆ ವ್ಯಾಪಿಸಿದೆ. ಇದರ ಹಿಂದೆ ಕಿಡಿಗೇಡಿಗಳು ಕೈವಾಡ ಇದೆ ಎಂದು ಶಂಕಿಸಲಾಗಿದೆ. ಇನ್ನು ಸ್ಥಳೀಯರು, ಅರಣ್ಯ ಇಲಾಖೆ ಹಾಗೂ ನಂದಿ ಗಿರಿಧಾಮದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದರು.