ಬೆಂಬಲಿಗರೊಂದಿಗೆ ಸಂಸದ ಡಾ ಕೆ.ಸುಧಾಕರ್ 
ಚಿಕ್ಕಬಳ್ಳಾಪುರ

ಎಲ್ಲಿಗೆಲ್ಲಿಗೆ ಮೈಸೂರು ರಾಜರಿಗೂ, ಸಿದ್ಧರಾಮಯ್ಯಗೂ ಹೋಲಿಕೆ!

ಮೈಸೂರು ರಾಜಮನೆತನದವರೊಂದಿಗೆ ಸಚಿವ ಯತೀಂದ್ರ ಸಿದ್ದರಾಮಯ್ಯರ ಮಾತಿನ ಸಮರಕ್ಕೆ ಸಂಸದ ಡಾ ಕೆ.ಸುಧಾಕರ್‌ ಬೇಸರ

ಚಿಕ್ಕಬಳ್ಳಾಪುರ: ನಾಡು ನುಡಿಗಾಗಿ ತ್ಯಾಗ ಮಾಡಿದಂತಹ, ಅಭಿವೃದ್ಧಿಗೆ ಮಹತ್ತರವಾದ ಕೊಡುಗೆಗಳನ್ನು ನೀಡಿದ ರಾಜರು ಎಲ್ಲಿ? ರಾಜಕಾರಣಿಗಳು ಎಲ್ಲಿ? ಈ ಇಬ್ಬರಿಗೂ ಹೋಲಿಸುವುದು ಸರಿಯಲ್ಲ ಎಂದು ಸಂಸದ ಡಾ ಕೆ.ಸುಧಾಕರ್‌ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಮೈಸೂರು ರಾಜರು ಎಲ್ಲಿ?, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ? ಇವರ ಹೋಲಿಕೆಯೂ ನಿಂಬೆಕಾಯಿ ಮೋಸಂಬಿಗೂ ಇರುವ ವ್ಯತ್ಯಾಸ ಎನ್ನಬಹುದು.  ರಾಜಮನೆತನದವರು ರಾಜ ಖುಷಿಯಾಗಿ ಕೆಲಸ ಮಾಡಿದ್ದಾರೆ. ಇವರನ್ನು ರಾಜಕಾರಣಿ ಹೋಲಿಸುವುದು ಅಪಹಾಸ್ಯವೇ ಸರಿ ಎಂದು ವ್ಯಂಗ್ಯವಾಡಿದ್ದಾರೆ.

ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಇನ್ನು ರಾಜಕಾರಣದ ತರಬೇತಿ ಅಗತ್ಯವಿದೆ. ಅವರ ತಂದೆ ಸಿದ್ದರಾಮಯ್ಯ ಮಾರ್ಗದರ್ಶನ ಪಡೆಯಬೇಕಾಗಿದೆ. ಮೈಸೂರಿನಲ್ಲಿ ಕೆಲಸ ಮಾಡಿದಕ್ಕೆ ರಾಜಮನೆತನದವರ ಬಗ್ಗೆ ಹೋಲಿಕೆ ಮಾಡಿಕೊಂಡು ಮಾತನಾಡುವುದು ಒಂದು ಭ್ರಮೆಯಾಗಿರುತ್ತದೆ ಎಂದರು.