ಚಾಮರಾಜನಗರದ ಪಿ.ಕೆ.ಾರ್ಮ್‌ನಲ್ಲಿ ರೈತ ಪ್ರೇಮ್‌ಕುಮಾರ್ ಬೆಳೆದಿರುವ ಅಡಿಕೆ  
ಚಿಕ್ಕಬಳ್ಳಾಪುರ

ಹೊನ್ನ ಭೂಮಿಗೆ ‘ಕಳೆಯೇ ಗೊಬ್ಬರ’

ಪ್ರಮುಖ ಮುಖ್ಯಾಂಶಗಳು

  • ಎನ್‌ಎಚ್ ಪಕ್ಕದಲ್ಲೇ ಇದ್ದರೂ ಲೇಔಟ್ ಆಗದೆ ಚಂದದ ತೋಟ
  • ಸಾವಯವ ವಿಧಾನದಲ್ಲಿ ಹಣ್ಣಿನ ಗಿಡ-ಮರಗಳ ಕೃಷಿ
ಚಾಮರಾಜನಗರದ ರೈತ ಪ್ರೇಮ್‌ಕುಮಾರ್ ಬೆಳೆದಿರುವ ಅಡಿಕೆ
ಚಾಮರಾಜನಗರ: ನಗರ ಪ್ರದೇಶದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಜಮೀನು ಇದ್ದರೂ ಲೇಔಟ್ ಆಗದೆ ಕೃಷಿ ಭೂಮಿಯಾಗಿಯೇ ಉಳಿದಿರುವ ಈ ಮಣ್ಣಿಗೆ ಪೋಷಕಾಂಶವನ್ನೆಲ್ಲಾ ಹೀರಿಕೊಂಡು ಬಿತ್ತಿದ ಬೆಳೆಗೆ ಹಾನಿ ಮಾಡುವ ಕಳೆಯೇ ಜೀವ ತುಂಬುತ್ತಿರುವ ಗೊಬ್ಬರ..!
ನಗರದ ಬಂಜಾರ ಇಂಡಿಯನ್ ಸ್ಕೂಲ್‌ನಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಗುವ ಪಿ.ಕೆ.ಾರ್ಮ್‌ನ 3 ಎಕರೆ ಜಮೀನಿಗೆ ರಿಯಲ್ ಎಸ್ಟೇಜ್‌ನಲ್ಲಿ ಚಿನ್ನದ ಬೆಲೆ ಇದೆ. ಇದರ ಮಾಲೀಕರಾಗಿರುವ 17ನೇ ವಾರ್ಡ್‌ನ ನಿವಾಸಿ ಪ್ರೇಮ್‌ಕುಮಾರ್ ಈ ಜಮೀನನ್ನು ಮಾರಾಟ ಮಾಡದೆ ಕೃಷಿ ಭೂಮಿಯಾಗಿಯೇ ಉಳಿಸಿಕೊಂಡಿದ್ದಾರೆ.
ಮಣ್ಣಿನ ಗುಣ ತಿಳಿದಿರುವ ಪ್ರೇಮ್‌ಕುಮಾರ್‌ಗೆ ಇದೇ ಮಣ್ಣಿನ ಋಣವಿನ ಅರಿವೂ ಚೆನ್ನಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಜಮೀನು ಮಾರಾಟ ಮಾಡಿ ಭೂಮಿ ಕಳೆದುಕೊಂಡ ರೈತನಾಗುವ ಬದಲು ಭೂಮಿಯ ಉಳಿವು ಮುಖ್ಯವೆನ್ನುವುದು ಗೊತ್ತಿದೆ. ರಿಯಲ್ ಎಸ್ಟೇಟ್‌ನವರು ಜಮೀನು ಖರೀದಿಗೆ ಕೇಳಿದರೂ ಮಾರಾಟ ಮಾಡದೆ ಚೆಂದದ ತೋಟ ನಿರ್ಮಾಣ ಮಾಡಿದ್ದಾರೆ.
3 ಎಕರೆ ಜಮೀನಿನಲ್ಲಿ ವಿವಿಧ ಹಣ್ಣಿನ ಗಿಡ, ಮರಗಳಿವೆ. ಇವುಗಳಿಗೆ ರಾಸಾಯನಿಕ ಗೊಬ್ಬರ ಹಾಕದೆ, ಕಳೆ ಸಸ್ಯವನ್ನೇ ಕೊಳೆಸಿ ಗೊಬ್ಬರವನ್ನಾಗಿ ಮಾಡುತ್ತಿದ್ದಾರೆ. ಈ ಪೋಷಕಾಂಶ ಹಲವು ಹಣ್ಣಿನ ಗಿಡ-ಮರಗಳ ಉತ್ತಮ ಬೆಳವಣಿಗೆಗೆ ಪೂರಕವಾಗಿರುವುದು ಅಚ್ಚರಿ ಮೂಡಿಸುತ್ತದೆ.
ಏನೇನು ಗಿಡ-ಮರಗಳಿವೆ:
ತೋಟದಲ್ಲಿ 2 ಸಾವಿರ ಅಡಿಕೆ ಮರಗಳಿವೆ. ಇವುಗಳಲ್ಲಿ 800 ಮರಗಳು ಲ ಕೊಡುತ್ತಿವೆ. 1750 ನೇಂದ್ರ ಬಾಳೆ, ಕಬ್ಬು, 25 ಮಾವಿನ ಮರಗಳು, ತೆಂಗು, 20 ಸಪೋಟಾ, 25 ಸೀಬೆ, ವಾಟರ್ ಆಪಲ್, ಹಲಸು, ಕರಿಬೇವು, ವಿಳ್ಯದ ಎಲೆ, ಸೀತಾಲ ಇನ್ನಿತರೆ ಹಣ್ಣಿನ ಗಿಡಗಳಿವೆ. ಇವುಗಳಿಗೆ ವರ್ಷಕ್ಕೆ ಒಂದು ಸಲ ದನದ ಗೊಬ್ಬರ ನೀಡುತ್ತಾರೆ. ಇದನ್ನು ಬಿಟ್ಟರೆ ತೋಟದಲ್ಲಿ ಬೆಳೆದಿರುವ ಕಳೆಯನ್ನು ಕಿತ್ತು ಮಣ್ಣಿನಲ್ಲಿ ಕೊಳೆಸಿ ಗೊಬ್ಬರವನ್ನಾಗಿ ನೀಡುತ್ತಿದ್ದಾರೆ. ಗಿಡ-ಮರಗಳಲ್ಲಿ ರೋಗ ಕಾಣಿಸಿಕೊಂಡರೆ ಹುಳಿ ಮಜ್ಜಿಗೆ ಮತ್ತು ಇತರೆ ಸಾವಯವ ದ್ರಾವಣವನ್ನು ತಯಾರಿಸಿ ಸಿಂಪಡಿಸುತ್ತಾರೆ. ಒಂದು ಬೋರ್‌ವೆಲ್ ಇದ್ದು ಇದರ ಮೂಲಕ ನೀರು ಸಂಗ್ರಹಣೆ ಮಾಡಲು ಸ್ವಂತ ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಮೂಲಕ ಜಲ ನೀಡುತ್ತಿದ್ದಾರೆ.
ಪಾರ್ಥೇನಿಯಂ ಕಳೆಯೂ ಇಲ್ಲಿ ಗೊಬ್ಬರ:
ಎಲ್ಲೆಂದರಲ್ಲಿ ಬೆಳೆದುಬಿಡುವ ಪಾರ್ಥೇನಿಯಂ ಗಿಡವನ್ನೂ ಸಹ ಮಣ್ಣಿನಲ್ಲಿ ಕೊಳೆಸಿ ಗೊಬ್ಬರವಾಗಿ ಮಾಡಬಹುದು ಎಂದು ರೈತ ಪ್ರೇಮ್‌ಕುಮಾರ್ ಹೇಳುತ್ತಾರೆ. ಪಾರ್ಥೇನಿಯಂ ದ್ವಿಗುಣವಾಗುವ ಮೊದಲೇ ಕತ್ತರಿಸಬೇಕು. ಇಲ್ಲದಿದ್ದರೆ ಬೆಳೆಗೆ ಹಾನಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ತೋಟ, ಜಮೀನುಗಳಲ್ಲಿ ಪಾರ್ಥೇನಿಯಂ ಬೆಳೆದರೆ ರೈತರಿಗೆ ಚಿಂತೆ ಉಂಟಾಗುತ್ತದೆ. ಆದರೆ ಪ್ರೇಮ್‌ಕುಮಾರ್ ಈ ಪಾಥೆರ್ರ್ನಿಯಂ ಅನ್ನು ಕಿತ್ತು ಗಿಡ-ಮರಗಳ ಬುಡದಲ್ಲಿ ಕೊಳೆಸಿ ಗೊಬ್ಬರ ಮಾಡುತ್ತಿದ್ದಾರೆ. ಇದರಿಂದ ಉತ್ತಮ ಲಿತಾಂಶವೂ ದೊರೆಯುತ್ತಿದೆ ಎನ್ನುತ್ತಾರೆ.
ಸಾವಯವ ತೋಟ, ಚೆಂದದ ನೋಟ..
10 ವರ್ಷಗಳ ಹಿಂದೆ ರಾಸಾಯನಿಕ ಬಳಕೆ ಮಾಡುತ್ತಿದ್ದ ಪ್ರೇಮ್‌ಕುಮಾರ್ ಬಳಿಕ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ಶುರು ಮಾಡಿದರು. ಮಣ್ಣಿನ ಪರೀಕ್ಷೆ ಮಾಡಿಸಿ, ಅದರ ಗುಣ ಧರ್ಮ ಅರಿತುಕೊಂಡರು. ರಾಸಾಯನಿಕ ಮುಕ್ತ ಕೃಷಿ ಮಾಡುವ ಮೂಲಕ ಮಣ್ಣಿನ ಲವತ್ತತೆಯನ್ನು ಮತ್ತಷ್ಟು ಹೆಚ್ಚಳ ಮಾಡಿದರು. ಇದರ ಪರಿಹಾರ ಸಪೋಟಾ, ಮಾವು, ಅಡಿಕೆ, ತೆಂಗು ಮತ್ತು ಇತರೆ ಬೆಳೆಗಳು ಉತ್ತಮವಾಗಿ ಬೆಳೆದಿವೆ. ಬಹುರುಚಿಕರವಾಗಿರುವ ಮಾವಿನ ಮರಗಳಿಗೆ ಸ್ವಲ್ಪವೂ ರಾಸಾಯನಿಕ ಸಿಂಪಡನೆ ಮಾಡಿಲ್ಲ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ಇಚ್ಛಿಸುವ ರೈತರು ಇವರ ತೋಟಕ್ಕೊಮ್ಮೆ ಭೇಟಿ ನೀಡಬಹುದು. ಚೆಂದದ ತೋಟ ಕೃಷಿಕರ ನೋಟವನ್ನು ಸೆಳೆಯುತ್ತದೆ.
ಕಾರ್ಮಿಕರ ಕೊರತೆಗೂ ಪರಿಹಾರ:
ಕೃಷಿಯನ್ನು ಕಾಡುತ್ತಿರುವ ಸವಾಲುಗಳಲ್ಲಿ ಕಾರ್ಮಿಕರ ಕೊರತೆ ಪ್ರಧಾನವಾಗಿದೆ. ಯಂತ್ರೋಪಕರಣಗಳ ಬಳಕೆಗೂ ಕಾರ್ಮಿಕರು ಬೇಕಾಗಿದ್ದಾರೆ. ಇದಕ್ಕೆ ಸಾವಯವ ಪದ್ಧತಿಯ ಕೃಷಿ ಪರಿಹಾರವಾಗಿ ಕಾಣುತ್ತದೆ. ರೈತ ಪ್ರೇಮ್‌ಕುಮಾರ್ ವಾಸ ಮಾಡುತ್ತಿರುವ 17ನೇ ವಾರ್ಡ್‌ನದಲ್ಲೂ 3 ಎಕರೆಯಲ್ಲಿ ಅಡಿಕೆ, ಬಾಳೆ ಕೃಷಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಪಿ.ಕೆ.ಾರ್ಮ್‌ನಲ್ಲೂ ತೋಟ ಮಾಡಿದ್ದಾರೆ. ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿದ್ದು, ಕಡಿಮೆ ಶ್ರಮ, ಕೂಲಿಕಾರರನ್ನು ಬೇಡುವ ಈ ವಿಧಾನವು ಒಬ್ಬರೇ ತೋಟ ನೋಡಿಕೊಳ್ಳಲು ನೆರವಾಗುತ್ತಿದೆ.
"

ರಾಸಾಯನಿಕ ಬಳಕೆ ಮಾಡಿದರೂ ಉತ್ತಮ ಬೆಳೆ ಬರುವುದಿಲ್ಲ ಮತ್ತು ಹೆಚ್ಚು ಲಾಭ ಸಿಗುವುದಿಲ್ಲ. ಸಾವಯವ ವಿಧಾನದಲ್ಲಿ ಕಡಿಮೆ ಬಂಡವಾಳ ಹೆಚ್ಚು ಲಾಭ ಸಿಗುತ್ತದೆ. ನಮ್ಮ ತೋಟದ ಹಣ್ಣುಗಳಿಂದ ವರ್ಷಕ್ಕೆ 3 ಲಕ್ಷ ರೂ. ಆದಾಯ ದೊರೆಯುತ್ತಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಮುಕ್ತವಾಗಿ ಹಣ್ಣಿನ ಗಿಡ, ಮರಗಳನ್ನು ಬೆಳೆಯಲಾಗುತ್ತಿದೆ.