ಗುಡಿಬಂಡೆ ತಾಲೂಕಿನ ಕ್ವಾರಿಯೊಂದರಲ್ಲಿ ಬ್ಲಾಸ್ಟಿಂಗ್ ಮಾಡಲು ಬೋರ್ವೆಲ್ ಮೂಲಕ ಕೊರೆಯುತ್ತಿರುವುದು.
- ಕ್ಯಾರೇ ಎನ್ನದ ಅಧಿಕಾರಿಗಳು
- ಮಾಲೀಕರೊಂದಿಗೆ ಶಾಮೀಲು ಆರೋಪ
- 5 ಕಿಮೀ ಭೂಮಿ ಕಂಪನ
ಎನ್.ವಿ. ವೆಂಕಟೇಶ್ ಗುಡಿಬಂಡೆ
ಗುಡಿಬಂಡೆ ಭಾಗದಲ್ಲಿನ ಕಲ್ಲು ಕ್ಯಾರಿಗಳಿಂದ ಸ್ಥಳಿಯರು ಸಮಸ್ಯೆ ಅನುಭವಿಸುತ್ತಿದ್ದರೂ ಜಿಲ್ಲಾಧಿಕಾರಿಗಳಾಗಲೀ, ಗಣಿ, ಭೂವಿಜ್ಞಾನ ಇಲಾಖೆ, ಆರ್ಟಿಒ ಅಧಿಕಾರಿಗಳಾಗಲೀ ಸಾರ್ವಜನಿಕರಿಗೆ ಸಮಸ್ಯೆ ಆಲಿಸದ ಕಾರಣ ಅಧಿಕಾರಿಗಳ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ತಾಲೂಕಿನ ದಪ್ಪರ್ತಿ ಗ್ರಾಪಂ ವ್ಯಾಪ್ತಿಯ ಕಲ್ಲು ಗಣಿ ತಲೆ ಎತ್ತಿದ್ದು, ಅಲ್ಲಿನ ಓವರ್ ಬ್ಲ್ಯಾಸ್ಟಿಂಗ್ನಿಂದ ಮನೆ ಬಿರುಕು ಬಿಡುತ್ತಿವೆ, ಜತೆಗೆ ಕ್ವಾರಿ ಪಕ್ಕದ ಜಮೀನುಗಳಲ್ಲಿ ರೈತರು ಬೆಳೆದಿರುವ ಬೆಳೆಗಳು ಧೂಳಿನಿಂದ ನಾಶವಾಗುತ್ತಿವೆ. ಆದರೆ ಅಧಿಕಾರಿಗಳು ರೈತರಪರ ನಿಲ್ಲದೇ ಕಲ್ಲು ಕ್ವಾರಿ ಮಾಲೀಕರ ಪರ ನಿಲ್ಲುತ್ತಿರುವ ಆರೋಪ ಕೇಳಿಬಂದಿದೆ.
ಅಧಿಕಾರಿಗಳು, ಮಾಲೀಕರ ರ್ನಿಲಕ್ಷ$್ಯ: ಪ್ರತಿ ದಿನ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ, ಕನಿಷ್ಠ ಪರಿಶೀಲನೆಯನ್ನೂ ಮಾಡುವುದಿಲ್ಲ, ಗಣಿಗಾರಿಕೆ ಮಾಡಲು ಅನುಮತಿ ನೀಡಿರುವುದೇ ತಪು$್ಪ, ಗ್ರಾಮದ ಪಕ್ಕದಲ್ಲೇ ಗಣಿಗಾರಿಕೆ ಅನುಮತಿ ನೀಡಿದರೆ ನಮ್ಮ ಪರಿಸ್ಥಿತಿ ಏನು? ಯಾರೋ ಬೆಂಗಳೂರಿಗರು ಬಂದು ಇಲ್ಲಿ ನಮಗೆ ತೊಂದರೆ ನೀಡಿ, ಅವರು ಹಣಗಳಿಸಿಕೊಳ್ಳುತ್ತಿದ್ದಾರೆ, ಅವರ ಬೆಂಬಲವಾಗಿ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡುತ್ತಿರುವುದು ನೋವಿನ ಸಂಗತಿ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತಕೊಂಡು ಬ್ಲಾಸ್ಟಿಂಗ್ ಮಾಡದಂತೆ ಆದೇಶ ನೀಡಬೇಕಾಗಿದೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ನಮ್ಮ ಮನೆಗಳು ಬಿರುಕು ಬೀಳುತ್ತಿದ್ದು, ಓವರ್ ಬ್ಲ್ಯಾಸ್ಟಿಂಗ್ ಮಾಡಬೇಡಿ ಎಂದು ಗ್ರಾಮಸ್ಥರು ಗಣಿಗಾರಿಕೆ ಮಾಲೀಕರಿಗೆ ಮನವಿ ಮಾಡಿದರೂ ಗ್ರಾಮಸ್ಥರ ಮಾತುಗಳಿಗೆ ಕಿವಿಗೊಡದೆ, ಸರ್ಕಾರ, ಅಧಿಕಾರಿಗಳು ಅನುಮತಿ ನೀಡಿದ್ದಾರೆ, ನೀವು ಯಾರಿಗೆ ಬೇಕಾದರೂ ದೂರು ನೀಡಿ ಎಂಬ ಉಢಾಫೆ ಉತ್ತರ
ನೀಡುತ್ತಾರೆ ಎಂಬುದು ಗ್ರಾಮಸ್ಥರ ಅಳಲು.
ಈಗಾಗಲೇ ನಾನು ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿದ್ದೇನೆ, ನಮ್ಮ ಜತೆಗೆ ಪೊಲೀಸ್ ಇಲಾಖೆ, ಆರ್ಟಿಒ ಅವರ ಪಾತ್ರ ಹೆಚ್ಚಾಗಿದ್ದು, ಅವರು ಟಿಪ್ಪರ್ಗಳ ಓವರ್ ಲೋಡಿಂಗ್ ತಡೆಯಬೇಕು. ಪ್ರತಿ 3 ದಿನಕ್ಕೊಮ್ಮೆ ಪೊಲೀಸರು ಕ್ವಾರಿಗೆ ಭೇಟಿ ನೀಡಿ ಸಿಡಿ ಮದ್ದುಗಳನ್ನು ಪರಿಶೀಲಿಸಿಬೇಕು, ಈಗಲೂ ಸಹ ಕ್ವಾರಿಗಳಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
| ಸಿಗ್ಬತ್ವುಲ್ಲಾ ತಹಸೀಲ್ದಾರ್, ಗುಡಿಬಂಡೆ
ಗ್ರಾಮ ಸಮೀಪದ ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ಬೋರ್ವೆಲ್ಗಳಿಂದ ಕೊರೆದು ಬ್ಲ್ಯಾಸ್ಟಿಂಗ್ ಮಾಡುತ್ತಾರೆ. ಕ್ವಾರಿಗಳಿಂದ ಟಿಪ್ಪರ್ಗಳಲ್ಲಿ ಕಲ್ಲು ತುಂಬಿಸಿಕೊಂಡು ಹೋಗುವಾಗ ಮಿತಿ ಮೀರಿದ ತೂಕದ ಕಲ್ಲು ಹಾಕಿತ್ತಾರೆ, ನಮ್ಮ ಗ್ರಾಮದಲ್ಲೇ ಪ್ರತಿ ದಿನ ರಸ್ತೆಯಲ್ಲಿ ಕಲ್ಲುಗಳು ಬಿದ್ದಿರುತ್ತವೆ, ಇದರಿಂದ ನಮಗೆ ಸಮಸ್ಯೆ ಆಗುತ್ತಿದೆ, ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳು ಮಾತ್ರ ಬಂದು ನೋಡುವುದಿಲ್ಲ ಇನ್ನಾದರೂ ಅಧಿಕಾರಿಗಳು ಆಗುತ್ತಿರುವ ಸಮಸ್ಯೆ ಪರಿಹರಿಸಬೇಕಾಗಿದೆ.
| ಮುಜಾಹಿದ್ ಭತ್ತಲಹಳ್ಳಿ ಗ್ರಾಮಸ್ಥ
ಕ್ವಾರಿಗಳಲ್ಲಿ ಕೆಲಸ ನಿರ್ವಹಿಸುವಾಗ ಜನರಿಗೆ ತೊಂದರೆ ಆಗಬಾರದೆಂಬ ಆದೇಶಗಳಿವೆ. ಆದರೆ, ಸರ್ಕಾರಿ ಆದೇಶ ಗಾಳಿಗೆ ತೂರಿರುವ ಕ್ವಾರಿ ಮಾಲೀಕರು ಡ್ರಿಲ್ಲಿಂಗ್ ಮಾಡಲು ಬೋರ್ವೆಲ್ ವಾಹನ ಬಳಕೆ ಮಾಡುತ್ತಿದ್ದಾರೆ, ಬೋರ್ವೆಲ್ ಡ್ರಿಲ್ಲಿಂಗ್ನಿಂದ 5 ಕಿಲೋ ಮೀಟರ್ ದೂರದವರೆಗೂ ಭೂಮಿ ಅದರುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಮನೆಗಳಿಗೆ ಹಾನಿಯಾಗುತ್ತಿದೆ.