ಮುಖಾಮುಖಿ ಡಿಕ್ಕಿ ಹಿನ್ನೆಲೆಯಲ್ಲಿ ನುಜ್ಜುಗುಜ್ಜಾಗಿರುವ ವಾಹನಗಳು 
ಚಿಕ್ಕಬಳ್ಳಾಪುರ

ವಾಹನಗಳ ನಡುವೆ ಭೀಕರ ಅಪಘಾತ, ಇಬ್ಬರು ಚಾಲಕರ ಸಾವು

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಪೋತೇನಹಳ್ಳಿ ರಸ್ತೆಯಲ್ಲಿ
ಬುಲೆರೊ ಹಾಗೂ ಬಲ್ಕರ್ ವಾಹನಗಳು ಮುಖಾ ಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲಿಯೇ ಎರಡು ವಾಹನಗಳ ಚಾಲಕರು ಮೃತಪಟ್ಟಿದ್ದಾರೆ.
ಗೌರಿಬಿದನೂರು ತಾಲೂಕಿನ ಜಕ್ಕೇನಹಳ್ಳಿಯ ಬಲ್ಕಾರ್ ಚಾಲಕ ಅಶೋಕ್ (25), ಮತ್ತೊಬ್ಬ ಬುಲೆರೋ ವಾಹನದ ಚಾಲಕ ಆಂಧ್ರಪ್ರದೇಶದ ಸಂಜೀವ ರಾಯನಪಲ್ಲಿ ಸೀನಾ (೨೬) ಮೃತರು. ಗೌರಿಬಿದನೂರು ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಲ್ಕರ್ ಮತ್ತು ಬೆಂಗಳೂರು ಕಡೆಯಿಂದ ಗೌರಿಬಿದನೂರು ಕಡೆಗೆ ಬರುತ್ತಿದ್ದ ಬುಲೆರೋ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬಲ್ಕರ್ ಲಾರಿ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಮನೆಯ ಮುಂಭಾಗದ ಫುಟ್ ಪಾತ್ ಮೇಲೆ ನಿಂತಿದೆ.
ಬುಲೆರೋ ವಾಹನದಲ್ಲಿ ಇದ್ದ ಇನ್ನೊರ್ವ ಚಾಲಕ ಆಂಧ್ರಪ್ರದೇಶದ ಸಂಜೀವರಾಯಪಲ್ಲಿ ಗ್ರಾಮದ ಅಶೋಕ್ (೨೫)ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಜಗನ್ನಾಥ್ ರಾಯ್, ಡಿ ವೈ ಎಸ್ ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಅಂಜನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು
ಮಂಚೇನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.