ವಿದ್ಯುತ್‌ ಅವಘಡಕ್ಕೆ ಮೃತಪಟ್ಟವರು.  
ಚಿಕ್ಕಬಳ್ಳಾಪುರ

ಗ್ರಾಮದಲ್ಲಿ ಹಬ್ಬದ ಸಂಭ್ರಮ ವೇಳೆ ವಿದ್ಯುತ್‌ ಅವಘಡ, ಇಬ್ಬರು ಸಾವು

ಶಿಡ್ಲಘಟ್ಟ: ಇಲ್ಲಿನ ವೈ ಹುಣಸೇನಹಳ್ಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಣೆಯ ಸಂಭ್ರಮದ ಸಿದ್ಧತೆಯಲ್ಲಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ, ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಗ್ರಾಮದ ಚೇತನ್ (೨೭) ಹಾಗೂ ಸಂತೋಷ್ (೩೫) ಮೃತರು. ಗ್ರಾಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ದೇವಸ್ಥಾನದ ಅಲಂಕಾರಕ್ಕಾಗಿ ಸೀರಿಯಲ್ ಸೆಟ್ಗಳ ವೈರ್ಗಳನ್ನು ಅಳವಡಿಸುವ ವೇಳೆ ಲೈಟಿಂಗ್ಗೆ ಬಳಸುತ್ತಿದ್ದ ವೈರ್ವೊಂದು ಜನರೇಟರ್ ಮೇಲೆ ಬಿದ್ದಿದೆ. ಇದರ ನಡುವೆ ಜನರೇಟರ್ನ್ನು ದೇವಸ್ಥಾನದ ಒಳಭಾಗಕ್ಕೆ ತಳ್ಳುತ್ತಿದ್ದ ಚೇತನ್ ಮತ್ತು ಸಂತೋಷ್ ವಿದ್ಯುತ್ ಶಾಕ್ ಹೊಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.