ಶಿಡ್ಲಟ್ಟ ತಾಲೂಕಿನ ವರದನಾಯಕನಹಳ್ಳಿಯಲ್ಲಿ ಹಿಪ್ಪುನೇರಳೆ ತೋಟಕ್ಕೆ ವಿಷಕಾರಿ ರಾಸಾಯನಿಕ ಸಿಂಪಡಿಸಿದ ಪರಿಣಾಮ ರೇಷ್ಮೆ ಕೃಷಿಗೆ ಹಾನಿಯಾಗಿರುವುದನ್ನು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ, ರೇಷ್ಮೆ ವಿಸ್ತರಣಾಧಿಕಾರಿ ಜಗದೇವಪ್ಪ ಗುಗ್ಗರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಿಡ್ಲಟ್ಟ: ವರದನಾಯಕನಹಳ್ಳಿಯ ರೈತ ಜಗದೀಶ್ ಅವರ ಹಿಪ್ಪುನೇರಳೆ ತೋಟಕ್ಕೆ ಮಂಗಳವಾರ ಕಿಡಿಗೇಡಿಗಳು ವಿಷಕಾರಿ ರಾಸಾಯನಿಕ ಸಿಂಪಡಿಸಿದ್ದು, ಬೆಳೆ ಹಾನಿಯಾಗಿದೆ.
ಹಿಪ್ಪುನೇರಳೆ ಸೊಪ್ಪು ಕಟಾವು ಮಾಡಲು ತೋಟಕ್ಕೆ ತೆರಳಿದ ವೇಳೆ ರಾಸಾಯನಿಕದ ವಾಸನೆ ಬಂದಿದ್ದು, ಪರಿಶೀಲಿಸಿದಾಗ ರಾಸಾಯನಿಕ ಬಾಟಲಿಯ ಮುಚ್ಚಳ ಪತ್ತೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಟಾವು ಮಾಡಿದ ಸೊಪ್ಪಿನ ಸ್ವಲ್ಪ ಭಾಗವನ್ನು ಪ್ರತ್ಯೇಕವಾಗಿ ಕೆಲವು ರೇಷ್ಮೆ ಹುಳುಗಳಿಗೆ ನೀಡಿದಾಗ ಅವು ಮೃತಪಟ್ಟಿವೆ. ಇದರಿಂದ ತೋಟದ ಸೊಪ್ಪಿಗೆ ವಿಷಕಾರಿ ರಾಸಾಯನಿಕ ಸಿಂಪಡಣೆ ಮಾಡಿರುವುದು ದೃಢಪಟ್ಟಿದೆ.
20 ಮೂಟೆ ಹಿಪ್ಪುನೇರಳೆ ಸೊಪ್ಪು ಹಾನಿಗೊಳಗಾಗಿದ್ದು, ಎಚ್ಚರ ವಹಿಸದಿದ್ದರೆ 60 ಮೊಟ್ಟೆಗಳ ರೇಷ್ಮೆ ಬೆಳೆ ನಾಶವಾಗುವ ಸಾಧ್ಯತೆ ಇತ್ತು. 6 ತಿಂಗಳ ಹಿಂದೆಯೂ ಇದೇ ರೀತಿ ಆಗಿತ್ತು ಎಂದು ಜಗದೀಶ್ ತಿಳಿಸಿದ್ದಾರೆ.
ತಪ್ಪಿತಸ್ಥರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಹಂಡಿಗನಾಳ ಗ್ರಾಪಂ ಮಾಜಿ ಅಧ್ಯಕ್ಷ ಮುನಿರೆಡ್ಡಿ
ಶಿಡ್ಲಟ್ಟ ವಿಭಾಗದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಅಕ್ಮಲ್ಪಾಷಾ ಹಾಗೂ ರೇಷ್ಮೆ ವಿಸ್ತರಣಾಧಿಕಾರಿ ಜಗದೇವಪ್ಪ ಗುಗ್ಗರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಕ್ಮಲ್ ಪಾಷಾ ಮಾತನಾಡಿ, 16 ವರ್ಷಗಳ ಸೇವಾ ಅವಧಿಯಲ್ಲಿ ಇಂತಹ ಟನೆ 3ನೇ ಬಾರಿ ಕಂಡುಬಂದಿದೆ. ತೋಟಗಳಿಗೆ ವಿಷಕಾರಿ ರಾಸಾಯನಿಕ ಸಿಂಪಡಿಸುವುದು ಖಂಡನೀಯ. ರೈತರು ಸೊಪ್ಪು ಕಟಾವು ಮಾಡುವ ಮುನ್ನ ತೋಟವನ್ನು ಪರಿಶೀಲಿಸಿ ಮುನ್ನೆಚ್ಚರಿಕೆ ವಹಿಸಬೇಕು ಎಂದರು.