ಯುವರಾಜ್​ (25)  
ಚಿಕ್ಕಬಳ್ಳಾಪುರ

ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ

ಪ್ರಮುಖ ಮುಖ್ಯಾಂಶಗಳು

  • ಬೀಡಾ ಅಂಗಡಿ ನಡೆಸುತ್ತಿದ್ದ ಯುವರಾಜ್​ (25)
  • 2 ತಿಂಗಳ ಹಿಂದೆ ಬೆಂಗಳೂರಿನಿಂದ ಕೆಲಸ ಬಿಟ್ಟು ಬಂದಿದ್ದ
  • ಕೋಲಾರ ಕ್ರಾಸ್​ಬಳಿ ಬೀಡಾ ಅಂಗಡಿ ಮಾಡಿಕೊಂಡಿದ್ದ.
ಚಿಂತಾಮಣಿ: ನಗರದ ನಿವಾಸಿ, ಬೀಡಾ ಅಂಗಡಿ ನಡೆಸುತ್ತಿದ್ದ ಯುವರಾಜ್​ (25) ಸಾಲಗಾರರ ಕಾಟಕ್ಕೆ ಬೇಸತ್ತು ಗುರುವಾರ ರಾತ್ರಿ ಗೋಪಸಂದ್ರದ ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಶ್ರೀನಿವಾಸ್​ ಅವರ ಅನಾರೋಗ್ಯದ ಕಾರಣ ಯುವರಾಜ್​ 2 ತಿಂಗಳ ಹಿಂದೆ ಬೆಂಗಳೂರಿನಿಂದ ಕೆಲಸ ಬಿಟ್ಟು, ಕೋಲಾರ ಕ್ರಾಸ್​ಬಳಿ ಬೀಡಾ ಅಂಗಡಿ ಮಾಡಿಕೊಂಡಿದ್ದ. ಪರಿಚಯಸ್ಥರಿಂದ 10 ಲಕ್ಷ ರೂ. ಸಾಲ ಪಡೆದಿದ್ದ ಜತೆಗೆ ಮೀಟರ್​ ಬಡ್ಡಿಗೂ ಸಾಲ ಪಡೆದಿದ್ದ. ಸಾಲಕೊಟ್ಟವರು ಇತ್ತೀಚೆಗೆ ಹಣ ಮರಳಿಸುವಂತೆ ಒತ್ತಾಯಿಸಿದ್ದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶ್ರೀನಿವಾಸ್​ ನೀಡಿದ ದೂರಿನ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.