ಪೌರಾಯುಕ್ತೆ ಅಮೃತಾ ಬೆಂಬಲಿಸಿ ನಡೆಸಿದ ಪ್ರತಿಭಟನೆ 
ಚಿಕ್ಕಬಳ್ಳಾಪುರ

ಪೌರಾಯಕ್ತೆಗೆ ಬೆದರಿಕೆ, ಅನಾಮಧೇಯನಿಂದ ಬಂದ ಎಚ್ಚರಿಕೆ ಪತ್ರ

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾಗೆ ಅನಾಮಧೇಯ ವ್ಯಕ್ತಿಯೊಬ್ಬರು ಬರೆದಿರುವ ಪತ್ರವೊಂದು ಬಂದಿದೆ.
ಅಂಚೆ ಮೂಲಕ ಸಂಜೆ ನಗರಸಭೆ ಕಚೇರಿಗೆ ತಲುಪಿದ್ದು ಪೌರಾಯುಕ್ತೆ ಜಿ.ಅಮೃತ ಕೈ ಸೇರಿದೆ. ಅನಾಮಧೇಯ ವ್ಯಕ್ತಿ ಬರೆದ ಪತ್ರ ತೀವ್ರ ಕುತೂಹಲ ಮತ್ತು ಕೆಲ ಅನುಮಾನಗಳಿಗೂ ಕಾರಣವಾಗಿದೆ.
ಪತ್ರವನ್ನು ಸಂಪೂರ್ಣವಾಗಿ ಓದಿರುವ ಪೌರಾಯುಕ್ತೆ ಅಮೃತ ಅವರು ಅನಾಮಧೇಯ ವ್ಯಕ್ತಿಯೊಬ್ಬರಿಂದ ಬಂದಿರುವ ಪತ್ರದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಹಿರಿಯ ಅಧಿಕಾರಿಗಳ ಸೂಚನೆಯಂತೆ ಪತ್ರವನ್ನು ಶಿಡ್ಲಘಟ್ಟ ನಗರಠಾಣೆ ಪೊಲೀಸರಿಗೆ ನೀಡಿದ್ದಾರೆ.
ಪತ್ರವನ್ನು ವಶಕ್ಕೆ ಪಡೆದ ಪೊಲೀಸರು ಅಂಚೆ ಮೂಲಕ ಬಂದಿರುವ ಅನಾಮಧೇಯ ಪತ್ರದ ಜಾಡು ಜಾಲಾಡಲು ಮುಂದಾಗಿದ್ದಾರೆ.
ಪತ್ರದಲ್ಲಿ ನಿಮ್ಮನ್ನು ಟಾರ್ಗೆಟ್ ಮಾಡಲಾಗಿದೆ. ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂಬ ಸಲಹೆ ನೀಡಲಾಗಿದೆ.‌ ಯಾರಿಗೆ ಪತ್ರ ಕಳುಹಿಸಬೇಕೋ ಅವರ ವಿಳಾಸ ಇದೆ. ಆದರೆ, ಪತ್ರ ಎಲ್ಲಿಂದ ಬಂದಿದೆ ಎಂಬುದರ ವಿಳಾಸವಿಲ್ಲ.
ಶಿಡ್ಲಘಟ್ಟ ನಗರದಲ್ಲಿ ಫೆಕ್ಲ್ಸ್, ಬ್ಯಾನರು ಅಳವಡಿಕೆ ವಿಚಾರವಾಗಿ ಪೌರಾಯುಕ್ತರಿಗೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.‌ ಇದರ ನಡುವೆ ಅಧಿಕಾರಿಗೆ ಅನಾಮದೇಯ ಪತ್ರ ಬಂದಿದೆ.