ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇಗುಲ 
ಚಿಕ್ಕಬಳ್ಳಾಪುರ

ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇಗುಲದಲ್ಲಿನ ದೇವರ ಆಭರಣಗಳ ಕಳವು

ಚಿಕ್ಕಬಳ್ಳಾಪುರ: ಇಲ್ಲಿನ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ದೇವರ ಬೆಳ್ಳಿ ಆಭರಣಗಳು ಕಳ್ಳತನವಾಗಿವೆ.
ವಿಶೇಷ ದಿನಗಳಲ್ಲಿ ಆರ್ಕಷಕ ಅಲಂಕಾರದೊಂದಿಗೆ ದೇವರಿಗೆ ಹಾಕುತ್ತಿದ್ದ ಆಭರಣಟಗಳನ್ನು ಇಲ್ಲಿನ ಅರ್ಚಕ ಶೇಷ್‌ಭಟ್‌ ಮನೆಯಲ್ಲಿನ ಬೀರುವಿನಲ್ಲಿಡಲಾಗಿತ್ತು. ಇದರ ನಡುವೆ ಕಳ್ಳರು ಸ್ಕೂ ಡ್ರೈವರ್‌ ಬಳಸಿ ಬಾಗಿಲು ಕಿತ್ತು ಆಭರಣಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಎಂದಿನಂತೆ ಪೂಜಾರಿಗಳು ದೇಗುಲದಲ್ಲಿ ಪೂಜೆ ಸಲ್ಲಿಸಿ ಮನೆಗೆ ವಾಪಸ್‌ ಬಂದು ನೋಡಿದಾಗ ಕಳ್ಳತನ ಪ್ರಕರಣವು ಬಯಲಿಗೆ ಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿಯೇ ಪೂಜಾರಿಗಳ ಮನೆಯಿದ್ದು ವಿಶೇಷ ದಿನಗಳಂದು ಬೀರುವಿನಲ್ಲಿದ್ದ ಬೆಳಳಿ ಬುಟ್ಟಿ, ಬೆಳ್ಳಿ ಜರಡಿ, ಆರಾಧನೆ ಬೆಳ್ಳಿ ಬಟ್ಟಲು, ಅಭಿಷೇಕ ಮಾಡುವ ಬೆಳ್ಳಿಯ ಶಂಕು ಹಾಗೂ ಚೆಂಬು, ದೇವರಿಗೆ ತೊಡಗಿಸುವ ಆಭರಣಗಳು ಸೇರಿದಂತೆ ಒಂದೂ ವರೆ ಕೆ.ಜಿ.ಯ ಆಭರಣಗಳನ್ನು ಮನೆಯಲ್ಲಿಡಲಾಗಿತ್ತು. ಇನ್ನು ಅರ್ಚಕರು ಮನೆಗೆ ಬೀಗ ಬಿಟ್ಟು ಚಿಲಕ ಮಾತ್ರ ಹಾಕಿದ್ದು ಇದರ ಬಗ್ಗೆ ಮಾಹಿತಿ ತಿಳಿದುಕೊಂಡು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.