- ಮದ್ಯ ಸೇವಿಸುವ ವಿಚಾರಕ್ಕೆ ಜಗಳ
- ಪುತ್ರನಿಂದಲೇ ತಂದೆಯ ಕೊಲೆ
- ಸಂಜಯ್ ಕುಮಾರ್(25) ಆರೋಪಿ
ಗೌರಿಬಿದನೂರು: ಮದ್ಯ ಸೇವಿಸುವ ವಿಚಾರಕ್ಕೆ ಜಗಳವಾಗಿ ಪುತ್ರನಿಂದಲೇ ತಂದೆಯ ಕೊಲೆಯಾಗಿದೆ. ಇಲ್ಲಿನ ನೆಹರೂಜಿ ನಗರದ
ಗಂಗಣ್ಣ(55) ಕೊಲೆಯಾದ ತಂದೆ. ಮಗ ಸಂಜಯ್ ಕುಮಾರ್(25) ಆರೋಪಿ.
ತಂದೆಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಭಾನುವಾರ ಸಂಜಯ್ಗೆ ಹೆಚ್ಚಿನ ಮದ್ಯ ಬೇಕು ಎಂದು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ತಂದೆಯ ಕೊಲೆಯಾಗಿದೆ ಎಂದು ಮೃತನ ಪುತ್ರಿ ನಗರದ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ವಿಚಾರ ತಿಳಿದು ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಂಜಯ್ ಕುಮಾರ್ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.