ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಪಿ.ಹರ್ಷ ಜಗನ್ನಾಥಗುಪ್ತ ಕುಟುಂಬಸ್ಥರು ಕೊಡುಗೆಯಾಗಿ ನೀಡಿದ ಶಬ್ದಕೋಶ, ಕಾರ್ಡ್ಬೋರ್ಡ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಿಕ್ಷಕಿ ರೇವತಿ, ಪಿ.ಹರ್ಷ, ಪ್ರಭಾರ ಮುಖ್ಯಶಿಕ್ಷಕ ಎಸ್.ಆರ್.ಸುರೇಂದ್ರ, ಪಿ.ಭರತ್, ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕ ಸಿದ್ದರಾಮಣ ಇದ್ದರು.
- ಶಬ್ದಕೋಶ, ಕಾರ್ಡ್ಬೋರ್ಡ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ
- ಪುಸ್ತಕ ಓದುವುದರಿಂದ ಜ್ಞಾನ ವಿಕಾಸವಾಗುತ್ತದೆ
- ಶಾಲೆಗೆ ಕೀರ್ತಿ ತರಬೇಕು
ಪಾತಪಾಳ್ಯ: ಜೀವನದಲ್ಲಿ ಶ್ರದ್ಧೆ, ಆತ್ಮವಿಶ್ವಾಸ, ಪರಿಶ್ರಮ, ನಿಶ್ಚಿತಗುರಿ ಇದ್ದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಬೆಂಗಳೂರಿನ ಚಿನ್ಮಯ ವಿದ್ಯಾಲಯದ ಶಿಕ್ಷಕಿ ರೇವತಿ ತಿಳಿಸಿದರು.
ಪಾತಪಾಳ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಬೆಂಗಳೂರಿನ ಪಿ.ಹರ್ಷ ಜಗನ್ನಾಥಗುಪ್ತ ಕುಟುಂಬಸ್ಥರು ಕೊಡುಗೆಯಾಗಿ ನೀಡಿದ ಶಬ್ದಕೋಶ, ಕಾರ್ಡ್ಬೋರ್ಡ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯ ಅಳವಡಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ಯಾವುದೇ ಸಮಸ್ಯೆಯನ್ನು ಆತ್ಮಸ್ಥೆ$ರ್ಯದಿಂದ ಎದುರಿಸಬೇಕು. ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಹೆಚ್ಚು ಅಂಕಗಳಿಸಿ ಶಿಕ್ಷಕರಿಗೆ, ಶಾಲೆಗೆ ಕೀರ್ತಿ ತರಬೇಕು ಎಂದರು. ಶಿಕ್ಷಕ ಎಂ.ಎಸ್.ಶ್ರೀನಿವಾಸನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನೈತಿಕತೆಯೂ ಮುಖ್ಯ. ಇಲ್ಲವಾದರೆ ಇನ್ನೊಬ್ಬರ ಹಂಗಿನಲ್ಲಿ ಬದುಕಬೆಕಾಗುತ್ತದೆ. ನೈತಿಕ ಮೌಲ್ಯ ಅಳವಡಿಸಿ ಸುಂದರ ಜೀವನ ನಡೆಸಬೇಕು ಎಂದರು. ಬೆಂಗಳೂರಿನ ಲೈಟ್ ಎ ಡ್ರೀಮ್ನ ವ್ಯವಸ್ಥಾಪಕ ಪಿ.ಹರ್ಷ ಮಾತನಾಡಿ, ಟಿವಿ, ಮೊಬೈಲ್ಗಳಿಂದ ದೂರವಿದ್ದು, ಓದಿನ ಕಡೆ ಗಮನ ಹರಿಸಬೇಕು. ಆದರ್ಶ ವ್ಯಕ್ತಿಗಳ, ದಾರ್ಶನಿಕರ ಜೀವನ ಚರಿತ್ರೆ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನ ವಿಕಾಸವಾಗುತ್ತದೆ ಎಂದರು.