ಸುಪ್ರೀಂ ಆದೇಶಕ್ಕೆ ಶಾಸಕ ಸುಬ್ಬಾರೆಡ್ಡಿ ಸಂತಸ
ಚಿಕ್ಕಬಳ್ಳಾಪುರ: ನಾನೇನು ತಪ್ಪು ಮಾಡಿಲ್ಲ, ಯಾವುದನ್ನೂ ಸಹ ಮುಚ್ಚಿಟ್ಟಿಲ್ಲ, ನನಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಶಾಸಕ ಅಸಿಂಧುಗೊಳಿಸಿ ಹೈಕೋರ್ಟ್‌ನೀಡಿದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ಬಾಗೇಪಲ್ಲಿ ಕ್ಷೇತ್ರದಲ್ಲಿ ಮೂರು ಬಾರಿ ಭಾರಿ ಮತಗಳ ಅಂತರದೊಂದಿಗೆ ಗೆಲುವು ಸಾಧಿಸಲಾಗಿದೆ. ಇದರ ನಡುವೆ ಕೆಲವರು ಗೊಂದಲ ವಿಚಾರವನ್ನಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದು ಇದಕ್ಕೆ ಸವೋಚ್ಚ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಸಲ್ಲಿಕೆಯಾದ ಪ್ರಮಾಣ ಪತ್ರದಲ್ಲಿ ಯಾವುದನ್ನೂ ಸಹ ಮುಚ್ಚಿಟ್ಟಿಲ್ಲ. ಎಲ್ಲ ವ್ಯವಹಾರದ ಮೂಲಗಳ ಒಟ್ಟು ಆದಾಯವನ್ನು ತೋರಿಸಲಾಗಿದೆ. ಒಂದೊಂದೇ ವ್ಯವಹಾರದ ಪಟ್ಟಿಯನ್ನು ತೋರಿಸಲು ಆಗುವುದಿಲ್ಲ. ಕೆಲ ಉದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸಿರುವ ಮಾಹಿತಿಯನ್ನು ನಮೂದಿಸಲು ಪುಟಗಟ್ಟಲೇ ದೊಡ್ಡ ದಾಖಲೆ ಬೇಕಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೇ ಅಪಪ್ರಚಾರ ಮಾಡಲಾಗುತ್ತದೆ ಎಂದರು.
ಸರ್ವೋಚ್ಚ ನ್ಯಾಯಲಯವು ಯಾವುದೇ ಷರತ್ತುಗಳಿಲ್ಲದೇ ಶಾಸಕ ಅಸಿಂಧುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಚುನಾವಣೆಯಲ್ಲಿ ಸೋತವರು ಒಂದೊಂದೇ ಅಂಶಗಳನ್ನಿಟ್ಟುಕೊಂಡು ವಿವಾದವನ್ನು ಸೃಷ್ಟಿಸುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿದೆ. ಇನ್ನು ಹೈಕೋರ್ಟ್ ಆದೇಶಕ್ಕೆ ಗೌರವಕ್ಕೆ ನೀಡಿ, ಕ್ಷೇತ್ರಕ್ಕೆ ಹೋಗಿರಲಿಲ್ಲ. ಈಗ ಸರ್ವೋಚ್ಚ ನ್ಯಾಯಾಲಯವು ನನ್ನ ಪರವಾಗಿ ತೀರ್ಪು ನೀಡಿದೆ ಎಂದು ತಿಳಿಸಿದ್ದಾರೆ.