ಮೃತ ವಿದ್ಯಾರ್ಥಿ 
ಚಿಕ್ಕಬಳ್ಳಾಪುರ

ವಿದ್ಯಾರ್ಥಿಯ ಬಲಿ ಪಡೆದ ಕೃಷಿ ಹೊಂಡ, ಪಾಲಕರ ಆಕ್ರಂದನ

ಚಿಕ್ಕಬಳ್ಳಾಪುರ: ಕೈ ಕಾಲು ತೊಳೆಯುಲು ಹೋಗಿ ಕೃಷಿ ಹೊಂಡದ ನೀರಿನ ಮುಳುಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಚೇಳೂರು ತಾಲೂಕಿನ ಪುಲ್ಲಗಲ್ಲು ಗ್ರಾಮದಲ್ಲಿ ನಡೆದಿದೆ.
ಪುಲ್ಲಗಲ್ಲು ಗ್ರಾಮದ ಡ್ರೈವರ್ ವೆಂಕಟೇಶ್ ಅವರ ಪುತ್ರ ತರುಣ್ (15) ಮೃತ ಬಾಲಕ. ಚೇಳೂರಿನ ಶ್ರೀ ಅರವಿಂದ ಅನುದಾನಿತ ಪ್ರೌಢಶಾಲೆಯಲ್ಲಿ 8ನೇ ತರಗತಿ ಪರೀಕ್ಷೆ ಮುಗಿಸಿ ಶಾಲೆಯ ರಜೆ ದಿನಗಳಲ್ಲಿದ್ದ ಕಾರಣ ತರುಣ್,
ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ತನ್ನ ಸ್ನೇಹಿತರೊಂದಿಗೆ ಮಧ್ಯಾಹ್ನ ಕೈ ಕಾಲು ತೊಳೆಯಲು
ಸಮೀಪದ ರಾಗಿಮ್ಯಾಕಲಪಲ್ಲಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಲಕ್ಷ್ಮೀ ರೆಡ್ಡಿ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯಲು ಹೋಗಿದ್ದ. ಇದೇ ವೇಳೆ ಕೃಷಿ ನೀರಿನ ಮುಳುಗಿ ಮೃತಪಟ್ಟಿದ್ದಾನೆ
ಸ್ಥಳಕ್ಕೆ ಚೇಳೂರು ಎಸ್ಐ ಕೆ.ಗಣೇಶ್ ಭೇಟಿನೀಡಿ ಪರಿಶೀಲಿಸಿದ್ದು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹೊಂಡಗಳಿಗೆ ರಕ್ಷಣೆ ಇಲ್ಲದ ಕಾರಣ ಇಂತಹ ಘಟನೆಗಳು ಹೆಚ್ಚು ಹೆಚ್ಚು ಸಂಭವಿಸುತ್ತಿವೆ.
ತೋಟಗಳಲ್ಲಿರುವ ಕೃಷಿ ಹೊಂಡಗಳಿಗೆ ಸುತ್ತಲೂ ಬೇಲಿ ಹಾಕಿಸಿ, ಮಕ್ಕಳು ಕೃಷಿ ಹೊಂಡದ ಬಳಿ ಹೋಗದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.