ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ವಿಶೇಷ ಪೂಜೆ 
ಚಿಕ್ಕಬಳ್ಳಾಪುರ

ಆದಿಯೋಗಿ ಸನ್ನಿಧಿಯಲ್ಲಿ ಸಪ್ತರ್ಷಿ ಆವಾಹನಂ ಪೂಜೆ

ಚಿಕ್ಕಬಳ್ಳಾಪುರ:ಇಲ್ಲಿನ ಹನುಮಂತಪುರ ಸಮೀಪದ ಈಶ ಫೌಂಡೇಷನ್‌ ನ ಆದಿಯೋಗಿ ಸನ್ನಿಧಿಯಲ್ಲಿ ಸಪ್ತರ್ಷಿ ಆವಾಹನಂ ಪೂಜಾಕಾರ್ಯಕ್ರಮಗಳು ಶುಕ್ರವಾರ ಸಂಭ್ರಮದಿಂದ ನೆರವೇರಿದವು.

ಲೋಕಕಲ್ಯಾಣಾರ್ಥ ಶಿವನ ಅನುಗ್ರಹವನ್ನು ಪಡೆಯುವ ನಿಟ್ಟಿನಲ್ಲಿ ಕಾಶಿಯ ಏಳು ಅರ್ಚಕರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದಲಿಂಗಕ್ಕೆ ವಿಶೇಷ ಅಭಿಷೇಕ, ಹೂವು ಸಮೇತ ರುದ್ರಾಭಿಷೇಕ ಅಲಂಕಾರ, ಶಯನ ಆರತಿಯನ್ನು ಕೈಗೊಳ್ಳಲಾಯಿತು.ಶಿವಸೋತ್ರ, ಪಾರಾಯಣ, ಭಕ್ತಿಗೀತೆಗಾಯನ ನಡೆಯಿತು.

ಸಪ್ತಋಷಿಗಳು ಭೂಲೋಕ ಕಲ್ಯಾಣಕ್ಕಾಗಿ ತಪ್ಪಸ್ಸನ್ನು ಆಚರಿಸಿದರು. ಇದಕ್ಕೆ ಸಂತೃಪ್ತನಾದ ಶಿವನು ಇಡೀ ಜೀವಸಂಕುಲ,ಸಸ್ಯ ಸಂಪತ್ತನ್ನು ಕಾಪಾಡಿದ. ಇಂತಹ ಪೂಜಾ ಕಾರ್ಯಕ್ರಮವನ್ನು ಕಾಶಿಯಲ್ಲಿ ವಿಶೇಷ ದಿನಗಳ ಸಂದರ್ಭದಲ್ಲಿನಿರಂತರವಾಗಿ ಕೈಗೊಳ್ಳಲಾಗುತ್ತಿದೆ.

ಇನ್ನುಕರ್ನಾಟಕ ಮಾತ್ರವಲ್ಲದೇ ಆಂಧ್ರ, ಕೇರಳ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಸಾಮೂಹಿಕ ಪ್ರಾರ್ಥನೆ ಹಾಗೂ ಭಜನೆಯಲ್ಲಿ  ಭಾಗವಹಿಸಿದ್ದರು.ಧ್ಯಾನ ಕೇಂದ್ರದಲ್ಲಿನ ಆದಿಯೋಗಿ ವಿಶೇಷತೆಯನ್ನು ತಿಳಿಸುವ ಲೇಸರ್‌ ಬೆಳಕಿನ ಚಿತ್ರ ಪ್ರದರ್ಶನವನ್ನುಕಣ್ಣು ತುಂಬಿಕೊಂಡರು.