ಚಿಕ್ಕಬಳ್ಳಾಪುರ: ಶಿಡ್ಲಘಟ್ಟತಾಲೂಕಿನ ಎಚ್.ಕ್ರಾಸ್ ಬಳಿಕಾರಿನಲ್ಲಿ ಆಗಮಿಸಿದ ಇಬ್ಬರು ದರೋಡೆಕೋರರುಕಾರ್ಮಿಕರಿಗೆ ಚಾಕು ತೋರಿಸಿ, ಮೊಬೈಲ್ಗಳನ್ನುದೋಚಿ ಪರಾರಿಯಾಗಲು ಪ್ರಯತ್ನಿಸಿದ್ದು ಇದರ ಭರದಲ್ಲಿ ಕಾರುಪಲ್ಟಿಯಾಗಿ ಬಿದ್ದು ಸ್ಥಳದಲ್ಲೆ ಒಬ್ಬದರೋಡೆಕೋರ ಮೃತಪಟ್ಟಿದ್ದಾನೆ.
ಮೂಲತಃ ಆಂಧ್ರದ ಚಿತ್ತೂರಿನ ಲಾರಿ ಚಾಲಕ ಸಿದ್ದು ಅಲಿಯಾಸ್ ಸಿದ್ದೇಶ್(೨೫) ಮೃತಪಟ್ಟವ. ಗಾಯಾಳು ಕನ್ನಮಂಗಲ ಲಾರಿಚಾಲಕ ವೈಶಾಖ್ (೨೮). ಇಬ್ಬರು ಕೈವಾರದಲ್ಲಿನೆಲೆಸಿದ್ದರು. ದರೋಡೆಗೆ ಯತ್ನಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನಎಚ್.ಕ್ರಾಸ್ ಮಾರ್ಗದ ಹಾರಡಿ ಬಳಿಟೈಲ್ಸ್ ಕಾರ್ಖಾನೆಯಲ್ಲಿನ ಉತ್ತರ ಪ್ರದೇಶದ ನಾಲ್ವರು ಕಾರ್ಮಿಕರುಕೆಲಸ ಬಿಟ್ಟು, ಸ್ವಂತ ಊರಿಗೆತೆರಳಲು ಹೋಗುತ್ತಿದ್ದ ಕಾರಿನಲ್ಲಿ ಬಂದ ಇಬ್ಬರು ಆರೋಪಿಗಳುಚಾಕು ತೋರಿಸಿ ಬೆದರಿಸಿದ್ದಾರೆ. ಮೊಬೈಲ್ಗಳನ್ನು ಕಸಿದುಕೊಂಡುಪರಾರಿಯಾಗಿದ್ದಾರೆ. ಇದೇ ವೇಳೆ ಗಸ್ತು ಮುಗಿಸಿ ಠಾಣೆಗೆ ವಾಪಸ್ಆಗುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಎಸ್ಐ ದರೋಡೆಯಬಗ್ಗೆ ಕೂಲಿ ಕಾರ್ಮಿಕರಿಂದ ಮಾಹಿತಿಪಡೆದುಕೊಂಡಿದ್ದಾರೆ. ತಕ್ಷಣ ಚುರುಕಾಗಿ ದರೋಡೆಕೋರರ ಕಾರನ್ನು ಹಿಂಬಾಲಿಸಿದ್ದಾರೆ.ಇದನ್ನು ತಿಳಿದುಕೊಂಡು ದರೋಡೆಕೋರರು ತಪ್ಪಿಸಿಕೊಳ್ಳಲುಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವರ ಕಾರು ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದಬೋದಗೂರು ಮಳಮಾಚನಹಳ್ಳಿ ಮಧ್ಯೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದೇಶ್‌ಮೃತಪಟ್ಟಿದ್ದಾನೆ. ವೈಶಾಖ್‌ಗೆ ಸಣ್ಣಪುಟ್ಟ ಗಾಯವಾಗಿದೆ. ಈ ಇಬ್ಬರು ಮದ್ಯ ಸೇವಿಸಿ, ದರೋಡೆಗೆ ಯತ್ನಿಸಿದ್ದರುಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರುತನಿಖೆ ಕೈಗೊಂಡಿದ್ದಾರೆ.