ಬಾಗೇಪಲ್ಲಿ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎನ್​.ಸಂಪಂಗಿ ಅವರನ್ನು ಸನ್ಮಾನಿಸಿದರು. ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ಮಾಜಿ ಸಚಿವ ಎನ್​.ಎಚ್​.ಶಿವಶಂಕರರೆಡ್ಡಿ, ಮಾಸನಪಲ್ಲಿ ನಾರಾಯಣಸ್ವಾಮಿ, ಎಸ್​ಟಿಡಿ ಮೂರ್ತಿ ಇದ್ದರು.  
ಚಿಕ್ಕಬಳ್ಳಾಪುರ

ನಿಷ್ಠೆಯಿಂದ ದುಡಿವರಿಗೆ ಕೈನಲ್ಲಿ ಸಿಕ್ಕೇ ಸಿಗಲಿದೆ ಜವಾಬ್ದಾರಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ, ಮಾಜಿ ಶಾಸಕ ಎನ್​.ಸಂಪಂಗಿ ಹೇಳಿಕೆ
  • ಬಾಗೇಪಲ್ಲಿಯಲ್ಲಿ ಸನ್ಮಾನ ಸಮಾರಂಭ
  • ಬಡವರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್​
ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಕಾಂಗ್ರೆಸ್​ ನಿಷ್ಠಾವಂತ ಕಾರ್ಯಕರ್ತರ ಪಕ್ಷವಾಗಿದ್ದು, ನಿಯತ್ತಿನಿಂದ ಪಕ್ಷ ಸಂಟನೆಯಲ್ಲಿ ತೊಡಗಿಸಿಕೊಂಡರೆ ಉನ್ನತ ಸ್ಥಾನಮಾನ ಸಿಗಲಿದೆ. ಇದಕ್ಕೆ ನನಗೆ ನೀಡಿರುವ ಜವಾಬ್ದಾರಿಯೇ ಉದಾಹರಣೆ ಎಂದು ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎನ್​.ಸಂಪಂಗಿ ಹೇಳಿದರು.
ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಎನ್​. ಸಂಪಂಗಿ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಇದುವರೆಗೂ ಒಮ್ಮೆಯೂ ಬಾಗೇಪಲ್ಲಿ ೇತ್ರದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ೇತ್ರದ ಜನರ ಮನ್ನಣೆಗಳಿಸಿರುವ ಶಾಸಕ ಸುಬ್ಬಾರೆಡ್ಡಿಗೆ ಈ ಬಾರಿ ಸಚಿವ ಸ್ಥಾನ ನೀಡುವಂತೆ ಸಿಎಂ ಮತ್ತು ಡಿಸಿಎಂ ಬಳಿ
ಒತ್ತಾಯಿಸಲಾಗುವುದು ಎಂದರು.
ಮಾಜಿ ಸಚಿವ ಎನ್​.ಎಚ್​.ಶಿವಶಂಕರರೆಡ್ಡಿ ಮಾತನಾಡಿ, ಕಾಂಗ್ರೆಸ್​ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎನ್​.ಸಂಪಂಗಿ ಹಾಗೂ ನನ್ನನ್ನು ಪಕ್ಷ ಗುರುತಿಸಿ ಉನ್ನತ ಸ್ಥಾನಮಾನ ಕೊಟ್ಟಿರುವುದು ಸಂತಸದ ವಿಚಾರ, ಬಡವರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್​ ಪಕ್ಷ$ವನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ಉದ್ದೇಶಕ್ಕಾಗಿ ಇಬ್ಬರು ಮಾಜಿ ಶಾಸಕರಿಗೆ ಅಧಿಕಾರ ಕೊಟ್ಟಿರುವುದರಿಂದ ಶಾಸಕ ಸುಬ್ಬಾರೆಡ್ಡಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದರು.
ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಮಾತನಾಡಿ, ೇತ್ರದ ಕೆಲವರು ಮಾಜಿ ಶಾಸಕ ಸಂಪಂಗಿ, ನನ್ನ ಬಗ್ಗೆ ಏನೇ ಮಾತನಾಡಿಕೊಂಡರೂ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡದೆ ಪಕ್ಷ ನಿಷ್ಠೆಗೆ ಬದ್ಧರಾಗಿ ಸೇವೆ ಸಲ್ಲಿಸಿದರು. ೇತ್ರದ ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರುವ ಸಂಪಂಗಿ ಅವರಿಗೆ ಉನ್ನತ ಹುದ್ದೆ ಕೊಟ್ಟಿರುವುದು ಸ್ವಾಗತಾರ್ಹ ಎಂದರು.
ಪುರಸಭೆ ಅಧ್ಯಕ್ಷ ಶ್ರೀನಿವಾಸ್​, ಉಪಾಧ್ಯಕ್ಷ ಸುಜಾತ ನರಸಿಂಹನಾಯ್ಡು, ಸದಸ್ಯರಾದ ಎಸ್​ಟಿಡಿ ಮೂರ್ತಿ, ಗಡ್ಡಂ ರಮೇಶ್​, ಮಾಸನಪಲ್ಲಿ ನಾರಾಯಣಸ್ವಾಮಿ, ಅಚೇಪಲ್ಲಿ ಗಂಗಿರೆಡ್ಡಿ, ಪೇರೆಸಂದ್ರ ದಯಾನಂದ್​, ೆೈನಾನ್ಸ್​ ವೆಂಕಟೇಶ್​, ರಸೂಲ್​ ಖಾನ್​, ಕೆ.ಟಿ.ವೀರಾಂಜನೇಯ, ಎಸ್​.ಎಸ್​.ರಮೇಶ್​ಬಾಬು, ಅಶ್ವತ್ಥಪ್ಪ, ಚಿನ್ನಪೂಜಪ್ಪ, ಎಲ್​ಐಸಿ ವೆಂಕಟರವಣಪ್ಪ, ರಮೇಶ್​, ಎರ್ರಕಿಟ್ಟಪ್ಪ ಇದ್ದರು.
12 ವರ್ಷಗಳ ನಂತರ ವೇದಿಕೆ ಹಂಚಿಕೊಂಡರು
ಕಳೆದ 2013ರಲ್ಲಿ ನಡೆದ ಚುನಾವಣೆಯಲ್ಲಿ ಬಾಗೇಪಲ್ಲಿ ೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಎನ್​. ಸಂಪಂಗಿ, ಪೇತರ ಅಭ್ಯರ್ಥಿಯಾಗಿ ಎಸ್​.ಎನ್​.ಸುಬ್ಬಾರೆಡ್ಡಿ ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ ಎನ್​.ಸಂಪಂಗಿ ಸೋತರು. ನಂತರದ ದಿನಗಳಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದರು. ಸುಬ್ಬಾರೆಡ್ಡಿ, ಸಂಪಂಗಿ ಒಂದೇ ಪಕ್ಷದಲ್ಲೇ ಇದ್ದರೂ, ಹಲವು ಚುನಾವಣೆ ಎದುರಿಸಿದರೂ 12 ವರ್ಷಗಳ ಕಾಲ ವೇದಿಕೆ ಹಂಚಿಕೊಂಡಿರಲಿಲ್ಲ. ಆದರೆ, ಸನ್ಮಾನ ಕಾರ್ಯಕ್ರಮದಲ್ಲಿ ಇಬ್ಬರು ಒಂದೇ ವೇದಿಕೆ ಹಂಚಿಕೊಂಡು ಪರಸ್ಪರ ಗುಣಗಾನ ಮಾಡಿ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದರು.