ಶಿಡ್ಲಟ್ಟ ತಾಲೂಕಿನ ದೊಡ್ಡದಾಸರಹಳ್ಳಿಯಲ್ಲಿ ಸುಟ್ಟುಕರಕಲಾದ ರೇಷ್ಮೆ ಚಂದ್ರಂಕಿಯ ಶೆಡ್​ನ್ನು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್​ ಪಾಷ, ರೇಷ್ಮೆ ನಿರೀಕ್ಷಕ ಜಗದೇವಪ್ಪ ಗುಗ್ಗರಿ ಪರಿಶೀಲಿಸಿದರು. 
ಚಿಕ್ಕಬಳ್ಳಾಪುರ

ಆಕಸ್ಮಿಕ ಬೆಂಕಿಗೆ ರೇಷ್ಮೆ ಚಂದ್ರಂಕಿ ಶೆಡ್​ ಭಸ್ಮ

ಶಿಡ್ಲಟ್ಟ : ತಾಲೂಕಿನ ದೊಡ್ಡದಾಸರಹಳ್ಳಿಯ ರೈತ ವೆಂಕಟಸ್ವಾಮಿ ಅವರಿಗೆ ಸೇರಿದ ರೇಷ್ಮೆ ಚಂದ್ರಂಕಿಯ ಶೆಡ್​ನಲ್ಲಿ ಬುಧವಾರ ರಾತ್ರಿ ಸಂಭವಿಸಿದ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ನಿಂದಾಗಿ ಆಕಸ್ಮಿಕ ಬೆಂಕಿ ತಗುಲಿ 250 ರೇಷ್ಮೆ ಚಂದ್ರಂಕಿಗಳು ಸುಟ್ಟು ಭಸ್ಮವಾಗಿವೆ. ಶೆಡ್​ನಲ್ಲಿ ಯಾರೂ ವಾಸವಿಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿರುವುದಿಲ್ಲ.
ಸ್ಥಳಕ್ಕೆ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರು, ಬೆಸ್ಕಾಂ ಅಧಿಕಾರಿಗಳು, ಕಂದಾಯ ಇಲಾಖೆಯ ಕಸಬಾ ರಾಜಸ್ವ ನಿರೀಕ್ಷಕರು ಭೇಟಿ ನೀಡಿ, ಸರ್ಕಾರಕ್ಕೆ ವರದಿ ನೀಡಿ ವಿಪತ್ತು ನಿರ್ವಹಣಾ ಅಧಿನಿಯಮದಡಿಯಲ್ಲಿ ಪರಿಹಾರ ದೊರಕಿಸಿಕೊಡಲು ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ರೈತ ವೆಂಕಟಸ್ವಾಮಿ ಅವರಿಗೆ ಧೈರ್ಯ ತುಂಬಿದರು.
ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತಿಶ್​ ಮಾತನಾಡಿ, ಈ ಕೂಡಲೇ ಸರ್ಕಾರದ ವತಿಯಿಂದ ಎರಡು ಲಕ್ಷ ರೂ. ಪರಿಹಾರ ನೀಡಬೇಕು. ದು@ಖದಲ್ಲಿರುವ ರೈತನಿಗೆ ಆತ್ಮಸ್ಥೆರ್ಯ ತುಂಬ ಬೇಕು. ಅತಿವೃಷ್ಟಿ, ಅನಾವೃಷ್ಟಿ, ವಿಪತ್ತು ನಿರ್ವಹಣೆ ಅಡಿಯಲ್ಲಿ ಸರ್ಕಾರ ನೀಡುವ ಪರಿಹಾರಧನ ತೀರಾ ಕಡಿಮೆ ಇದೆ. ಹಾಗಾಗಿ ಸರ್ಕಾರ ನೀಡುವ ಪರಿಹಾರದ ಧನ ಹೆಚ್ಚಳ ಮಾಡಬೇಕು. ನಷ್ಟವಾದ 7 ದಿನಗಳ ಒಳಗೆ ಸಂತ್ರಸ್ತ ರೈತನಿಗೆ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು. ಗ್ರಾಮದ ದೇವರಾಜ್​, ಮಂಜುನಾಥ್​, ರೈತ ವೆಂಕಟಸ್ವಾಮಿ ಹಾಜರಿದ್ದರು.