ಶಿಡ್ಲಘಟ್ಟದಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಹೋರಾಟಗಾರರ ಸಂಘದ ಪದಾಧಿಕಾರಿಗಳು ನ.29ರಂದು ಆಯೋಜಿಸಿರುವ ರಾಜ್ಯೋತ್ಸವ ಕುರಿತು ವಿವರಿಸಿದರು. ಗೌರವಾಧ್ಯಕ್ಷ ಚನ್ನೇಗೌಡ, ಉಪಾಧ್ಯಕ್ಷ ಸಿ.ಎಂ.ಬೈರೇಗೌಡ, ಕಾರ್ಯದರ್ಶಿ ರವಿಪ್ರಕಾಶ್, ಖಜಾಂಚಿ ಅಹಮದ್, ಮನೋಜ್ ಕುಮಾರ್, ಮಧುಲತಾ, ಪ್ರದಿಪ್, ಸುಬ್ರಮಣಿ, ಎಸ್.ಆರ್.ಮಂಜುನಾಥ್, ದ್ಯಾವಪ್ಪ, ಶ್ರೀನಿವಾಸ್, ಚಲುವರಾಜ್ ಇತರರು ಇದ್ದರು.
- ನಗರದಲ್ಲಿ ನ.29ರಂದು ರಾಜ್ಯೋತ್ಸವ
- ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ
- ನಗರದ ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಶಿಡ್ಲಘಟ್ಟ: ನಗರದಲ್ಲಿ ನ.29ರಂದು ರಾಜ್ಯೋತ್ಸವ ಹಮ್ಮಿಕೊಂಡಿದ್ದು ಎಲ್ಲ ಕನ್ನಡಿಗರು ಭಾಗವಹಿಸಿ ಎಂದು ಪ್ರಗತಿಪರ ಹೋರಾಟಗಾರರ ಸಂಘದ ಅಧ್ಯಕ್ಷ ವಿಸ್ಡಂ ನಾಗರಾಜ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಬಿ.ಎನ್.ರವಿಕುಮಾರ್, ಎಸ್ಪಿ ಕುಶಲ್ ಚೌಕ್ಸೆ, ಕನ್ನಡ ಚಿತ್ರರಂಗದ ಜೂನಿಯರ್ ಕಲಾವಿದರು ಭಾಗವಹಿಸಲಿದ್ದಾರೆ. ಕನ್ನಡ ಚಿತ್ರಗಿತೆಗಳ ಗಾಯನ, ರಸ ಸಂಜೆ ಇರಲಿದೆ. ಕಳೆದ ಭಾರಿ ರಾಜ್ಯೋತ್ಸವ ಆಚರಿಸಿ ಉಳಿದ ಹಣದೊಂದಿಗೆ ಸಂಘಟನೆಯಿಂದ ಹಣ ಸೇರಿಸಿ ಕಾರ್ಯಕ್ರಮ ನಡೆಸುತ್ತೇವೆ. ಯಾರಿಂದಲೂ ದೇಣಿಗೆ ಸಂಗ್ರಹಿಸುವುದಿಲ್ಲ ಎಂದರು.