Prioritize the enhancement of knowledge and skills.
ಚಿಕ್ಕಬಳ್ಳಾಪುರ : ಉನ್ನತ ಶಿಕ್ಷಣದ ಮೂಲಕ ಸಕಾರಾತ್ಮಕ ಸಮಾಜ ನಿರ್ಮಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ ಎಂದು ಸಂಸದ ಡಾ.ಕೆ.ಸುಧಾಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪೆರೇಸಂದ್ರದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ ಡಾ.ಕೆ.ಸುಧಾಕರ್ ಫೌಂಡೇಷನ್ ಹಾಗೂ ಸಾಯಿ ಕೃಷ್ಣ ಚಾರಿಟಬಲ್ ಟ್ರಸ್ಟ್ಯಿಂದ ಭಾನುವಾರ ಆಯೋಜಿಸಿದ್ದ ಜ್ಞಾನಸುಧಾ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಜನರು ಸಾಮಾಜಿಕ ಜಾಲತಾಣಗಳಲ್ಲಿಯೇ ಸಮಯ ಕಳೆಯಬಾರದು. ಶಿಕ್ಷಣ, ಜ್ಞಾನ ಮತ್ತು ಕೌಶಲ ವೃದ್ಧಿಗೆ ಆದ್ಯತೆ ನೀಡಬೇಕು. ಕಾಲಕ್ಕೆ ಅನುಗುಣವಾಗಿ ಬೆಳವಣಿಗೆಯ ಸಾಧನವಾಗಬೇಕೇ ಹೊರತು ತಂತ್ರಜ್ಞಾನದ ಹಿಡಿತದ ಕೈಗೊಂಬೆಯಾಗಬಾರದು ಎಂಧರು.
ಒಳ್ಳೆಯ ಪುಸ್ತಕದ ಓದು ಹಲವು ದೇಶಗಳನ್ನು ಸುತ್ತಿದ ಅನುಭವ ನೀಡುತ್ತದೆ. ಇದಕ್ಕೆ ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಡಾ.ಎಪಿಜೆ ಅಬ್ದುಲ್ ಕಲಾಂ, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಎಚ್.ನರಸಿಂಹಯ್ಯರಂತಹ ಮಹನೀಯರ ಬದುಕು ಎಲ್ಲರಿಗೂ ಶಾಶ್ವತ ಸ್ಪೂರ್ತಿ. ಬಡತನ, ಕಷ್ಟಗಳು ಮತ್ತು ಸವಾಲುಗಳು ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಅವರು ಸಾಧಕ ಜೀವನದಿಂದಲೇ ಸಾಬೀತುಪಡಿಸಿದ್ದಾರೆ. ಇದರ ಯಶಸ್ಸಿನ ಹಿಂದಿರುವ ಕಠಿಣ ಪರಿಶ್ರಮವನ್ನು ಅರಿತುಕೊಳ್ಳಬೇಕು. ಬೇರುಗಳನ್ನು ಗಟ್ಟಿಗೊಳಿಸಿಕೊಂಡು ನಂತರ ಆಕಾಶದೆತ್ತರಕ್ಕೆ ಬೆಳೆಯುವ ಬಿದಿರಿನಂತೆ ವಿದ್ಯಾರ್ಥಿಗಳು ತಾಳ್ಮೆ, ಶಿಸ್ತು ಮತ್ತು ನಿರಂತರ ಪರಿಶ್ರಮದಿಂದ ಉನ್ನತ ಸಾಧನೆ ತೋರಬೇಕು. ಹದಿಹರೆಯದ ಕಾಲ ಟ್ಟದಲ್ಲಿ ಮಾದಕ ವಸ್ತುಗಳು, ಕೆಟ್ಟ ಅಭ್ಯಾಸಗಳು ಹಾಗೂ ದಾರಿತಪ್ಪಿಸುವ ಚಟುವಟಿಕೆಯಿಂದ ದೂರವಿರಬೇಕು ಎಂದರು.
ವಿದ್ಯಾರ್ಥಿಯಾಗಿದ್ದಾಗ ಅನುಭವಿಸಿದ ಕಷ್ಟಗಳೇ ಇಂದು ಶಿಕ್ಷಣ ೇತ್ರದಲ್ಲಿ ಸೇವೆಗೆ ಪ್ರೇರಣೆ ನೀಡಿವೆ. ಇದಕ್ಕೆ ಮುಂದಿನ ದಿನಗಳಲ್ಲಿ ತಾಯಿ ಶಾಂತಾ ಹೆಸರಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಿಶ್ವಮಟ್ಟದ ವಿಶ್ವವಿದ್ಯಾಲಯ ಸ್ಥಾಪಿಸುವ ಕನಸನ್ನು ನನಸಾಗಿಸುವ ಸಂಕಲ್ಪ ಹೊಂದಲಾಗಿದೆ ಎಂದು ಸಂಸದರು ತಿಳಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 941 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರನಲ್ಲಿ ಡಾ.ಕೆ.ಸುಧಾಕರ್ ಫೌಂಡೇಷನ್ ಹಾಗೂ ಸಾಯಿ ಕೃಷ್ಣ ಚಾರಿಟಬಲ್ ಟ್ರಸ್ಟ್ಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜ್ಞಾನಸುಧಾ ವಿದ್ಯಾರ್ಥಿವೇತನವನ್ನು ಸಂಸದ ಡಾ.ಕೆ.ಸುಧಾಕರ್ ವಿತರಿಸಿದರು. ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಶಾಂತಾ ವಿದ್ಯಾ ಸಂಸ್ಥೆಯ ನಿರ್ದೇಶಕ ಪ್ರೊ.ಕೋಡಿರಂಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಪಿ.ಎನ್.ಚನ್ನಾಕೃಷ್ಣರೆಡ್ಡಿ ಇದ್ದರು.