ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಷದ ಊಟ ಸೇವಿಸಿರುವ ಡಿ.ಎಸ್.ಮದ್ದಿರೆಡ್ಡಿ ಕುಟುಂಬ ಸದಸ್ಯರು ಚಿಕಿತ್ಸೆ ಪಡೆಯುತ್ತಿರುವುದು.
- ಜಾಗದ ವಿಚಾರ ಗಲಾಟೆಗೆ ದುಷತ್ಯ
- ಒಂದೇ ಕುಟುಂಬದ 8 ಜನ ಆಸ್ಪತ್ರೆಗೆ ದಾಖಲು
- ದೇವಿರೆಡ್ಡಿಪಲ್ಲಿ ಪಾಪಿರೆಡ್ಡಿ(48), ಚೌಡರೆಡ್ಡಿ (25) ಬಂಧನ
ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ವಿಷ ಮಿಶ್ರಿತ ಊಟ ಸವಿದ ಒಂದೇ ಕುಟುಂಬದ 8 ಜನರು ಆಸ್ಪತ್ರೆ ಪಾಲಾಗಿರುವ ಪ್ರಕರಣ ದೇವಿರೆಡ್ಡಿಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ದೇವಿರೆಡ್ಡಿಪಲ್ಲಿ ಗ್ರಾಮದ ಡಿ.ಎಸ್.ಮದ್ದಿರೆಡ್ಡಿ, ಮಂಜುನಾಥ, ಭಾಗ್ಯಮ್ಮ, ಮಣಿ, ಮದ್ದಕ್ಕ, ಸುಬ್ರಮಣಿ, ಈಶ್ವರಮ್ಮ, ಭವ್ಯಾ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಬಾಗೇಪಲ್ಲಿ ತಾಲೂಕಿನ ದೇವಿರೆಡ್ಡಿಪಲ್ಲಿ ಪಾಪಿರೆಡ್ಡಿ(48), ಚೌಡರೆಡ್ಡಿ (25) ಆರೋಪಿಗಳನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ: ದೇವಿರೆಡ್ಡಿ ಪಲ್ಲಿಯ ಪಾಪಿರೆಡ್ಡಿ ಮತ್ತು ಡಿ.ಎಸ್.ಮದ್ದಿರೆಡ್ಡಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಮನೆ ಜಾಗದ ವಿಚಾರವಾಗಿ ಜಗಳ ನಡೆಯುತ್ತಿತ್ತು. ವಿವಾದಿತ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಬಾಗೇಪಲ್ಲಿ ಜೆಎಂಎಫ್ಸಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಗಲಾಟೆಯ ಸೇಡು ತೀರಿಸಿಕೊಳ್ಳಲು ಪಾಪಿರೆಡ್ಡಿ ಎಂಬಾತನೇ ಊಟದಲ್ಲಿ ವಿಷ ಬೆರೆಸಿ ಡಿ.ಎಸ್.ಮದ್ದಿರೆಡ್ಡಿ ಕುಟುಂಬದ ಸದಸ್ಯರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು, ಈ ಕೃತ್ಯಕ್ಕೆ ಅದೇ ಗ್ರಾಮದ ಚೌಡರೆಡ್ಡಿ ಎಂಬಾತನನ್ನು ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ಡಿ.ಎಸ್.ಮದ್ದಿರೆಡ್ಡಿ ಮನೆಯಲ್ಲಿ ದೊಡ್ಡವರು ಯಾರು ಇಲ್ಲದ ಸಮಯದಲ್ಲಿ ಚೌಡರೆಡ್ಡಿ ಗುರುವಾರ ಮಧ್ಯಾಹ್ನ ನೀರು ಕುಡಿಯುವ ನೆಪಹೇಳಿ ಮನೆಯೊಳಗೆ ಹೋಗಿ ಊಟಕ್ಕೆ ವಿಷ ಬೆರೆಸಿ ಕಾಲ್ಕಿತ್ತಿದ್ದಾನೆ. ಕೆಲಸ ಮುಗಿಸಿ ಮನೆಗೆ ಬಂದಿರುವ ಕುಟುಂಬದ ಸದಸ್ಯರು ವಿಷ ಮಿಶ್ರಿತ ಊಟ ಸೇವಿಸಿ ಅಸ್ವಸ್ಥರಾಗಿದ್ದು, ವಿಚಾರ ತಿಳಿದ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಅಡಿಷನಲ್ ಎಸ್ಪಿ ಜಗನ್ನಾಥ ರೈ, ಡಿವೈಎಸ್ಪಿ ಶಿವಕುಮಾರ್, ಬಾಗೇಪಲ್ಲಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಗುಡಿಬಂಡೆ ಠಾಣೆ ಇನ್ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಾಣಾಪಾಯದಿಂದ ಪಾರು: ಎಸ್ಪಿ ಕುಶಾಲ್ ಚೌಕ್ಸೆ ಮಾತನಾಡಿ, ದೇವಿರೆಡ್ಡಿಪಲ್ಲಿಯಲ್ಲಿ 8 ಜನರು ಅಸ್ವಸ್ಥತರಾಗಿದ್ದು, ಮದ್ದಿರೆಡ್ಡಿ ಕುಟುಂಬದ ಸದಸ್ಯರಿಗೆ ವಿಷದ ಊಟ ಸೇವಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಕುಟುಂಬದ ಎಲ್ಲ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಕೃಷಿ ಚಟುವಟಿಕೆ ಮುಗಿಸಿಕೊಂಡು ಮನೆಗೆ ಬಂದು ಊಟ ತಿಂದ ಸ್ವಲ್ಪ ಸಮಯಕ್ಕೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಈ ಬಗ್ಗೆ ಮನೆಯಲ್ಲಿದ್ದ ಮಕ್ಕಳನ್ನು ವಿಚಾರಿಸಿದಾಗ ಚೌಡರೆಡ್ಡಿ ಅಡುಗೆ ಮನೆಯೊಳಗೆ ಹೋಗಿ ಬಂದಿರುವ ವಿಷಯ ತಿಳಿಯಿತು.
ಅಸ್ವಸ್ಥಗೊಂಡ ಮಹಿಳೆ ದೇವಿರೆಡ್ಡಿಪಲ್ಲಿ