ಶಿಡ್ಲಟ್ಟದ ನಗರಸಭೆಯಡಿ ಬರುವ ಮಳಿಗೆಗಳಿಗೆ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಭೇಟಿ ನೀಡಿದ ಬಾಕಿ ತೆರಿಗೆ ಪಾವತಿಸುವಂತೆ ಅಂಗಡಿ ಮಾಲಿಕರಿಗೆ ತಿಳಿಸಿದರು.ನಗರಸಭೆ ಕಂದಾಯ ಅಧಿಕಾರಿ ನಾಗರಾಜ, ಕಂದಾಯ ನಿರೀಕ್ಷಕ ಸಂಜೀವ್ ಕುಮಾರ್, ಮೊಹಮದ್ ಅತೀಕ್ ಉಲ್ಲಾ ಇದ್ದರು.
- ವರ್ಷಗಟ್ಟಲೆ ಬಾಡಿಗೆ ಹಣ ಕಟ್ಟದಿರುವುದು ಬೆಳಕಿಗೆ
- ಸ್ಥಳದಲ್ಲೇ ನಿಂತು 4-5 ಅಂಗಡಿಗಳಿಗೆ ಬೀಗ ಹಾಕಿ ಬಂದ್
- ಕಡಿಮೆ ತೆರಿಗೆ ಉಳಿಸಿಕೊಂಡಿರುವ ಅಂಗಡಿಗಳ ಗೋಡೆಗೆ ನೋಟಿಸ್
ಶಿಡ್ಲಘಟ್ಟ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿಯ ಹೊಸ ಐಡಿಎಸ್ಎಂಟಿಯ 27 ಅಂಗಡಿ ಮಳಿಗೆಗಳಿಗೆ, ಸಂತೆ ಬೀದಿ ರಸ್ತೆಯಲ್ಲಿರುವ 2 ಕಡೆಯ ಮಳಿಗೆಗಳಿಗೂ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಮತ್ತು ಸಿಬ್ಬಂದಿ ಭೇಟಿ ನೀಡಿದ ಬಾಕಿ ಇರುವ ತೆರಿಗೆಯನ್ನು ಸ್ಥಳದಲ್ಲೇ ಲೆಕ್ಕಾಚಾರ ಮಾಡಿ ಹಣ ಪಾವತಿಸುವಂತೆ ಅಂಗಡಿ ಮಾಲಿಕರಿಗೆ ತಿಳಿಸಿದರು.ಕೆಲವು ಅಂಗಡಿಯವರು ವರ್ಷಗಟ್ಟಲೆ ಬಾಡಿಗೆ ಹಣ ಕಟ್ಟದಿರುವುದು ಬೆಳಕಿಗೆ ಬಂದಿತು. ನಗರಸಭೆ ಅಧಿಕಾರಿಗಳಿಗೆ ನೀವು ಏನು ಮಾಡುತ್ತಿದ್ದೀರಿ.. ವರ್ಷಗಟ್ಟಲೆ ಕಟ್ಟಬೇಕಾದ ತೆರಿಗೆ ಕಟ್ಟಿಲ್ಲ ಎಂದು ಪೌರಾಯುಕ್ತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲೇ ನಿಂತು 4-5 ಅಂಗಡಿಗಳಿಗೆ ಬೀಗ ಹಾಕಿ ಬಂದ್ ಮಾಡಿಸಿದರು. ಕಡಿಮೆ ತೆರಿಗೆ ಉಳಿಸಿಕೊಂಡಿರುವ ಅಂಗಡಿಗಳ ಗೋಡೆಗೆ ನೋಟಿಸ್ ಅಂಟಿಸಿದರು.ಪ್ರತಿ ತಿಂಗಳು ಬಾಡಿಗೆ ಕಟ್ಟುವುದು ನಿಮ್ಮ ಜವಾಬ್ದಾರಿ. ತಿಂಗಳುಗಟ್ಟಲೆ, ಕೆಲವರು ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡರೆ ಹೇಗೆ. ಇದು ತಪ್ಪು ಇನ್ನು ಮುಂದೆ ಬಾಡಿಗೆ ಬಾಕಿ ಉಳಿಸಿಕೊಂಡರೆ ಕ್ರಮ ಜರುಗಿಸಲಾಗುವುದು. ಮುಂದೆ ಬಾಡಿಗೆಯ ಟೆಂಡರ್ ಕರೆದಾಗ ಈಗ ಬಾಕಿ ಉಳಿಸಿಕೊಂಡಿರುವವರನ್ನು ಭಾಗವಹಿಸಲು ಬಿಡುವುದಿಲ್ಲ ಎಂದು ಪೌರಾಯುಕ್ತೆ ಜಿ.ಅಮೃತಾ ಅಂಗಡಿ ಮಾಲೀಕರಿಗೆ ಎಚ್ಚರಿಸಿದರು. ಕರ ವಸೂಲಿಗಾರರಾದ ಅಮರ ನಾರಾಯಣಸ್ವಾಮಿ, ಶ್ರೀನಿವಾಸ್, ನಾರಾಯಣಸ್ವಾಮಿ, ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ, ಶೇಖ್ ಆರಿಫ್ ನಗರಸಭೆ ಸಿಬ್ಬಂದಿ ಇದ್ದರು.