ಚಿಂತಾಮಣಿ ನಗರದ ಕೆಜಿಎನ್​ ಬಡಾವಣೆಯ ನಿವಾಸಿ ವರಲಕ್ಷಿ$್ಮ ಎಂಬವರು ಪಟಾಕಿ ಚೀಟಿಗೆ ಹಣ ತೊಡಗಿಸಿ ಮೋಸ ಹೋದ ಮಹಿಳೆಯರು. 
ಚಿಕ್ಕಬಳ್ಳಾಪುರ

ಮನೆ ಸಾಮಗ್ರಿ ಸಾಗಿಸಲು ವಿರೋಧ

ಪ್ರಮುಖ ಮುಖ್ಯಾಂಶಗಳು

  • ರಾತ್ರೋರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದ ಮಹಿಳೆಯ
  • ದೀಪಾವಳಿ ಬೆನಿಫಿಟ್​ ಸ್ಕೀಮ್​ ಹೆಸರಿನಲ್ಲಿ ಚೀಟಿ
  • ಅಕ್ಟೋಬರ್​ನಲ್ಲಿ ಮನೆಗೆ ಬೀಗ ಹಾಕಿ ಗಂಡನೊಂದಿಗೆ ಪರಾರಿ
ಚಿಂತಾಮಣಿ: ದೀಪಾವಳಿ ಪಟಾಕಿ ಚೀಟಿ ಹೆಸರಲ್ಲಿ ಹಣ ಕಟ್ಟಿಸಿಕೊಂಡು ರಾತ್ರೋರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದ ಮಹಿಳೆಯ ಸಾಮಗ್ರಿಗಳನ್ನು ಮಧ್ಯವರ್ತಿಗೆ ಹಸ್ತಾಂತರಿಸುತ್ತಿದ್ದಾಗ ಚೀಟಿ ಕಟ್ಟಿದ ಮಹಿಳೆಯರು ತಡೆದು ಪ್ರತಿಭಟಿಸಿದರು.
ನಗರದ ಕೆಜಿಎನ್​ ಬಡಾವಣೆ ವರಲಕ್ಷಿ$್ಮ (30) ದೀಪಾವಳಿ ಬೆನಿಫಿಟ್​ ಸ್ಕೀಮ್​ ಹೆಸರಿನಲ್ಲಿ ಚೀಟಿ ತೆರೆದು 6000 ರೂ.ಗೆ 1000 ಸೇರಿಸಿ 7 ಸಾವಿರ ರೂ. ಪಟಾಕಿ ಬಾಕ್ಸ್​, 1 ಸ್ಟೀಲ್​ ಪಾತ್ರೆ ನೀಡುವುದಾಗಿ ನೂರಾರು ಮಹಿಳೆಯರಿಂದ ಪ್ರತಿ ತಿಂಗಳು ಹಣ ಕಟ್ಟಿಸಿಕೊಂಡಿದ್ದರು. ಆದರೆ, ಅಕ್ಟೋಬರ್​ನಲ್ಲಿ ಮನೆಗೆ ಬೀಗ ಹಾಕಿ ಗಂಡನೊಂದಿಗೆ ಪರಾರಿಯಾಗಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಡಿಗೆ ಮನೆಯಲ್ಲಿದ್ದ ಮಧ್ಯವರ್ತಿ ಸಾಮಗ್ರಿ ಸಾಗಿಸುತ್ತಿದ್ದಾಗ ವರಲಕ್ಷಿ$್ಮ, ಗಂಡ ಅಂಬರೀಷ್​ ಬರುವವರೆಗೂ ಹಸ್ತಾಂತರ ಮಾಡದಂತೆ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಮನೆ ಮಾಲೀಕ, ಹಣ ಕಳೆದುಕೊಂಡ ಮಹಿಳೆಯರನ್ನು ಸಮಾಧಾನಪಡಿಸಿ ಎಲ್ಲರೂ ಠಾಣಾಧಿಕಾರಿಗಳನ್ನು ಭೇಟಿ ಮಾಡುವಂತೆ ಹೇಳಿ ಸಾಮಗ್ರಿ ಹಸ್ತಾಂತರ ತಡೆದರು.