ಗುಡಿಬಂಡೆ ಪಟ್ಟಣದ ಸಿವಿಲ್​, ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ ಅದಾಲತ್​ನಲ್ಲಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್​ ಪ್ರಕರಣ ಇತ್ಯರ್ಥಪಡಿಸಿದರು. 
ಚಿಕ್ಕಬಳ್ಳಾಪುರ

ಸಂಧಾನದಿಂದ ಸಮಯ, ಹಣ ಉಳಿತಾಯ

ಗುಡಿಬಂಡೆ: ಸಂಧಾನದಿಂದ ಪ್ರಕರಣ ಇತ್ಯರ್ಥ ಪಡಿಸಲು ರಾಜ್ಯ ಕಾನೂನು ಸೇವೆ ಪ್ರಾಧಿಕಾರ ರಾಷ್ಟ್ರೀಯ ಲೋಕ ಅದಾಲತ್​ ನಡೆಸುತ್ತಿದ್ದು, ಅವಕಾಶ ಸದುಪಯೋಗ ಪಡೆದುಕೊಳ್ಳಿ
ಎಂದು ಸಿವಿಲ್​, ಜೆಎಂಎಫ್​ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್​ ತಿಳಿಸಿದರು.
ಪಟ್ಟಣದ ಸಿವಿಲ್​, ಜೆಎಂಎಫ್​ಸಿ ನ್ಯಾಯಾಲಯದದಲ್ಲಿ ಕಾನೂನು ಸೇವೆ ಪ್ರಾಧಿಕಾರದಿಂದ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್​ನಲ್ಲಿ ಮಾತನಾಡಿದರು.
1332ರ ಪೈಕಿ 896 ಪ್ರಕರಣ ಇತ್ಯರ್ಥ ಪಡಿಸಲಾಗಿದ್ದು, 45,87,549 ರೂ. ವಸೂಲಾಗಿದ್ದು, 284 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 17 ಇತ್ಯರ್ಥ ಪಡಿಸಿ ಒಟ್ಟು 5,90,055 ರೂ. ವಸೂಲು ಮಾಡಿರುವುದಾಗಿ ತಿಳಿಸಿದರು.
ಸಂಧಾನಕಾರರಾಗಿ ವಕೀಲ ಕೆ.ವಿ.ಬಾಲಾಜಿ, ವಕೀಲರ ಸಂಘದ ಅಧ್ಯಕ್ಷ ಅಶ್ವತ್ಥರೆಡ್ಡಿ, ಉಪಾಧ್ಯಕ್ಷ ಕೆ.ಆರ್​.ಮಂಜುನಾಥ, ಹಿರಿಯ ವಕೀಲರಾದ ರಾಮನಾಥ ರೆಡ್ಡಿ, ನಾರಾಯಣಸ್ವಾಮಿ, ಬದರಿನಾಥ್​, ನಂದೀಶ್ವರ ರೆಡ್ಡಿ, ಬ್ಯಾಂಕ್​ ವ್ಯವಸ್ಥಾಪಕರು ಇದ್ದರು.