ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ 
ಚಿಕ್ಕಬಳ್ಳಾಪುರ

ಮೊಬೈಲ್ ಆಧಾರಿತ ಹಾಜರಿ ವ್ಯವಸ್ಥೆ, ಶಿಕ್ಷಣ ಇಲಾಖೆಯಲ್ಲಿ ಅನುಷ್ಠಾನ

ಕಚೇರಿಗಳು ಹಾಗೂ ಶಾಲೆಗಳಿಗೆ ತಡವಾಗಿ ಆಗಮನ, ಶೀಘ್ರ ನಿರ್ಗಮನ, ಹಾಜರಾತಿ ಪುಸ್ತಕದಲ್ಲಿ ಮನಸ್ಸಿಗೆ ಬಂದಂತೆ ಸಹಿ ಹಾಕಿಕೊಳ್ಳುವುದು ಸೇರಿದಂತೆ ನಾನಾ ಕಳ್ಳಾಟಗಳಿಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮೊಬೈಲ್‌ ಆಧಾರಿತ ಹಾಜರಾತಿ ದೃಢೀಕರಣಕ್ಕೆ ಆದೇಶಿಸಿದ್ದಾರೆ. ಅದರಂತೆ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕಚೇರಿಗಳಲ್ಲಿನ ವಿವಿಧ ಹಂತದ ಅಧಿಕಾರಿಗಳು, ಬೋಧಕೇತರ ಸಿಬ್ಬಂದಿ ಈ ವಿಶೇಷ ವ್ಯವಸ್ಥೆಯಲ್ಲಿ ಹಾಜರಾತಿಯನ್ನು ದೃಢೀಕರಿಸಿದ್ದು ಇದು ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಅನ್ವಯವಾಗುತ್ತಿದೆ.
ಕಾಮ್ಸ್ ಮೊಬೈಲ್ ಆಧಾರಿತ ಹಾಜರಾತಿ (ಕೆಎಎಎಂಎಸ್‌ಸ್) ಎಂಬುದು ಸಾಮಾನ್ಯವಾಗಿ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಎಂಬ ಸರ್ಕಾರಿ ತಂತ್ರಾಂಶ. ಇದರ ಮೂಲಕ ಸಿಬ್ಬಂದಿಯ ಹಾಜರಾತಿ ಖಾತ್ರಿ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ.
ಶಾಲಾ ಶಿಕ್ಷಣ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ, ಇಲಾಖೆಯ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಯಂತ್ರಗಳನ್ನು ಕೈಬಿಟ್ಟು ಮೊಬೈಲ್‌ ಆಧಾರಿತ ‘ಕಾಮ್ಸ್‌’ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.