ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರದಲ್ಲಿ ಕರ್ನಾಟಕ ಪ್ರಾಂತ ರೈತ ಸಂದ ಜಿಲ್ಲಾಧ್ಯ ಬಿ.ಎನ್.ಮುನಿಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
- ಮನರೇಗಾ ಹಳೇ ವ್ಯವಸ್ಥೆಗೆ ಮರುಜೀವ ನೀಡಿ
ಚಿಕ್ಕಬಳ್ಳಾಪುರ: ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸದೇ ಹಳೇ ಮಾದರಿ ವ್ಯವಸ್ಥೆಗೆ ಮರು ಜೀವ ನೀಡಬೇಕು ಎಂದು ಗ್ರಾಪಂಗಳ ಮೂಲಕ ವಿವಿಧ ಸಂಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಕರ್ನಾಟಕ ಪ್ರಾಂತ ರೈತ ಸಂ, ಸಿಐಟಿಯು, ಕೃಷಿಕಾರರು ಹಾಗೂ ಗ್ರಾಮೀಣ ಕಾರ್ಮಿಕರ ಸಂವು ಜಿಲ್ಲೆಯ ಅಜ್ಜವಾರ, ಪಟ್ರೇನಹಳ್ಳಿ, ಆವಲಗುರ್ಕಿ, ಹಾರೋಬಂಡೆ, ಗೊಲ್ಲಹಳ್ಳಿ, ಹೊಸಹುಡ್ಯ ಸೇರಿದಂತೆ 75 ಗ್ರಾಪಂಗಳ ಪಿಡಿಒಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂದ ಜಿಲ್ಲಾಧ್ಯ ಕಾಮ್ರೆಡ್ ಎಂ.ಪಿ.ಮುನಿವೆಂಕಟಪ್ಪ, ಸಿಐಟಿಯು ಜಿಲ್ಲಾಧ್ಯೆ ಲ್ಮದೇವಮ್ಮ, ಪ್ರಧಾನ ಕಾರ್ಯದರ್ಶಿ ಜಿ. ಸಿದ್ದಗಂಗಪ್ಪ, ಕರ್ನಾಟಕ ಪ್ರಾಂತ ರೈತ ಸಂದ ಜಿಲ್ಲಾ ಕಾರ್ಯದರ್ಶಿ ಚನ್ನರಾಯಪ್ಪ, ಬಿ.ಎನ್. ಮುನಿಕೃಷ್ಣಪ್ಪ,ಕೂಲಿಕಾರರ ಸಂದ ಜಿಲ್ಲಾ ಕಾರ್ಯದರ್ಶಿ ಮುನಿಯಪ್ಪ, ದಲಿತ ಹಕ್ಕುಗಳ ಸಮಿತಿಯ ಜಿ.ಕೃಷ್ಣಪ್ಪ, ಬಿಳ್ಳೂರು ನಾಗರಾಜು, ಚನ್ನರಾಯಪ್ಪ, ಲ್ಮದೇವಮ್ಮ, ಕೆ.ಮುನಿಯಪ್ಪ ಸೇರಿದಂತೆ ವಿವಿಧ ಮುಖಂಡರುಗಳು ವಿವಿಧ ತಾಲೂಕುಗಳಲ್ಲಿ ಹೋರಾಟಗಳ ನೇತೃತ್ವ ವಹಿಸಿದ್ದರು.
ಕೇಂದ್ರ ಸರ್ಕಾರದ ಹೊಸ ಉದ್ಯೋಗ ಖಾತ್ರಿ ಕಾಯ್ದೆ ನಿರುದ್ಯೋಗ ಗ್ಯಾರಂಟಿ, ಮನರೇಗಾ ಬಲಹೀನಗೊಳಿಸುವಂತಹುದು ಹಾಗೂ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾರ್ಮಿಕ ಸಂಹಿತೆಗಳುರದ್ದಾಗಲಿ, ಕಾರ್ಮಿಕರ ಕಾಯ್ದೆಗಳು ಉಳಿಯಲಿ,
ಜನರಿಗೆ ಉದ್ಯೋಗಾವಕಾಶ ಸಿಗಲಿ, ಗ್ರಾಮೀಣಾಭಿವೃದ್ಧಿಯಾಗಲಿ ಎಂಬುದಾಗಿ ಒತ್ತಾಯಿಸಲಾಯಿತು.
ಕರ್ನಾಟಕ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂದ ಜಿಲ್ಲಾಧ್ಯ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದ್ದು, ಇದಕ್ಕೆ ಮನರೇಗಾ ಬಲಪಡಿಸುವುದರ ಬದಲಾಗಿ ದುರ್ಬಲಗೊಳಿಸುತ್ತಿರುವುದು ಒಂದು ಉದಾಹರಣೆ. ಹೊಸ ಕಾಯ್ದೆಯು ಗ್ರಾಮೀಣ ಬಡವರನ್ನು ನಿರುದ್ಯೋಗ, ಹಸಿವು, ವಲಸೆ, ಸಾವು ಗ್ಯಾರಂಟಿಗೆ ಪೂರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿ ಕೇಂದ್ರ ಸರ್ಕಾರವು ನಾಲ್ಕು ಮಾರಕ ಕಾಯ್ದೆಗಳನ್ನು ಜಾರಿಗೊಳಿಸಿರುವುದು ಖಂಡನೀಯ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಕಿಡಿಕಾರಿದರು.
ಹೋರಾಟಗಾರರ ವಿವಿಧ ಬೇಡಿಕೆಗಳೇನು?: ನೂತನ ವಿಬಿ&ಜಿ&ರಾಮ್ ಜಿ ಕಾಯ್ದೆಯ ತಣ ರದ್ದು, ಆಧಾರ್ ಅನುಸಂಧಾನವನ್ನು
ಎರಡು ಬಾರಿ ಡಿಜಿಟಲ್ ಹಾಜರಾತಿ ವ್ಯವಸ್ಥೆ, ಕೆಲಸದ ಪ್ರದೇಶಗಳಲ್ಲಿ ಫೋಟೋ ತೆಗೆದು ಅಪ್ಲೋಡ್ ಮಾಡುವ ವಿಧಾನವನ್ನು ಕೈ ಬಿಡುವುದು, ಕಾರ್ಮಿಕರಿಗೆ ಅಪಾಯವಾಗಿರುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವುದು, ಮನರೇಗಾ ಮುಂದುವರಿಸಿ ಬಲಪಡಿಸುವುದು, ಕನಿಷ್ಠ 200 ದಿನಗಳ ಕೆಲಸದ ಖಾತ್ರಿ, ದಿನಕ್ಕೆ 700ರೂ ಕನಿಷ್ಠ ವೇತನ ಜಾರಿ, ಅರ್ಜಿ ಸಲ್ಲಿಸಿರುವ ಎಲ್ಲ ಬಡ ರೈತರಿಗೆ ಹಕ್ಕುಪತ್ರವನ್ನು ನೀಡುವುದು, ಮಸಣ ಕಾರ್ಮಿಕರನ್ನು ಗುರುತಿಸಿ ದೃಢೀಕರಣ ಪತ್ರ ವಿತರಣೆ, ಜಿಲ್ಲೆಯಲ್ಲಿ ಎಲ್ಲ ಬಡವರಿಗೆ ವಸತಿ ಸೌಲಭ್ಯ ಹಾಗೂ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನದ ಅವಧಿಯನ್ನು ಇನ್ನು ಒಂದು ತಿಂಗಳು ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳಈಡೇರಿಕೆಗೆ ಆಗ್ರಹಿಸಲಾಯಿತು.