ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿಬೇಡಿಕೆ ಹಾಗೂ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರು ಮಾರಾಟದ ಮಾವಿನ ಹಣ್ಣುಗಳಿಗೆ ಸರ್ಕಾರಬೆಂಬಲ ಬೆಲೆ ಘೋಷಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಕಳೆದ 2025-26 ನೇ ಸಾಲಿನಲ್ಲಿ ಮಾವಿನ ಬೆಲೆ ಕುಸಿತದಹಿನ್ನೆಲೆಯಲ್ಲಿ ಕೆ.ಜಿ.ಗೆ 4 ರೂಗಂತೆ ಟನ್ ಗೆ 4 ಸಾವಿರ ಬೆಂಬಲ ಬೆಲೆ ಘೋಷಿಸಲಾಗಿತ್ತು.ಅದೇ ರೀತಿ ಬಾರಿ ಉದ್ಭವವಾಗಿರುವ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ನೆರವು ಅಗತ್ಯವಿದೆ. ಪ್ರಸ್ತುತಮಾರುಕಟ್ಟೆಯಲ್ಲಿ ಕೆ.ಜಿ ತೋತಾಪುರಿ 7 ರೂ, ನೀಲಾಂಬರಿ 3 ರೂ ಇದ್ದು ಹೀಗೆ ವಿವಿಧ ಬಗೆಯ ತಳಿಗಳದರ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದಕ್ಕೆ 1 ಟನ್ ಗೆ ೧೫ ಸಾವಿರ ರೂ ಬೆಲೆ ಘೋಷಿಸಬೇಕು ಎಂದುರೈತರು ಒತ್ತಾಯಿಸಿದ್ದಾರೆ.