ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ, ಮಾಲು, ವಾಹನ ಸಮೇತ ಬಂಧಿಸುವ ಜಿಲ್ಲಾ ರಕ್ಷಣಾಧಿಕಾರಿಗಳ ವಿಶೇಷ ತಂಡ.
- ಟಿವಿಎಸ್ ಬೈಕ್, ಮದ್ಯ ವಶಪಡಿಸಿಕೊಳ್ಳಲಾಗಿದೆ.
- ಮುರುಗಮಲ್ಲಾ ಗ್ರಾಮದ ದೀಪಕ್(20) ಆರೋಪಿ
- ಗ್ರಾಮಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ
ಚಿಂತಾಮಣಿ: ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದು ಬೈಕ್ ಸವಾರನನ್ನು ಬಂಧಿಸಿ ಟಿವಿಎಸ್ ಬೈಕ್, ಮದ್ಯ ವಶಪಡಿಸಿಕೊಳ್ಳಲಾಗಿದೆ. ಮುರುಗಮಲ್ಲಾ ಗ್ರಾಮದ ದೀಪಕ್(20) ಆರೋಪಿ. ಗ್ರಾಮಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಾಣೆ ಮಾಡುತ್ತಿದ್ದಾಗ ತಾಲೂಕಿನ ಗುಂಡ್ಲಹಳ್ಳಿ ಕ್ರಾಸ್ ಬಳಿ ದಾಳಿ ನಡೆಸಿದ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಕುಶಲ್ಚೌಕ್ಸೆ ವಿಶೇಷ ತಂಡ 25 ಲೀಟರ್ ಮದ್ಯ, ಬೈಕ್ ವಶಕ್ಕೆ ಪಡೆದಿದೆ. ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.