ಸಾಯಿ ಸುರಭಿ ಹಾಗೂ ಸಂಜಿತ್‌ ಆಲಿ. 
ಚಿಕ್ಕಬಳ್ಳಾಪುರ

ಲವ್ ಜಿಹಾದ್ ಪ್ರಕರಣ: ಪ್ರಿಯತಮೆ ಸಾವು, ಪೊಲೀಸರ ವಶಕ್ಕೆ ಪ್ರಿಯಕರ

ಚಿಕ್ಕಬಳ್ಳಾಪುರ:ತಾಲೂಕಿನ ಮುದ್ದೇನಹಳ್ಳಿಸಮೀಪದ ಹೋಮ್ಸ್ಟೇ ನಲ್ಲಿಸಾಯಿ ಸುರಭಿಆತ್ಮಹತ್ಯೆಯ ಲವ್ಜಿಹಾದ್ ಪ್ರಕರಣದಲ್ಲಿಆಕೆಯ ಪ್ರಿಯಕರಸಂಚಿತ್ ಆಲಿಯನ್ನುಪೊಲೀಸರು ವಶಕ್ಕೆಪಡೆದುಕೊಂಡು ತನಿಖೆಕೈಗೊಂಡಿದ್ದಾರೆ.
ಪ್ರಿಯತಮೆಯ ಜತೆಗೆವಿಷಮಾತ್ರೆಗಳನ್ನು ಸೇವಿಸಿಅಸ್ವಸ್ಥಗೊಂಡಿದ್ದ ಆರೋಪಿಯನ್ನುಜಿಲ್ಲಾಸ್ಪತ್ರೆಗೆ ದಾಖಲಿಸಿಚಿಕಿತ್ಸೆ ಕೊಡಿಸಲಾಗಿತ್ತು.ಇದರಿಂದ ಚೇತರಿಸಿಕೊಂಡಿರುವಆಲಿಯನ್ನು ಪೊಲೀಸರುವಶಕ್ಕೆ ಪಡೆದುಕೊಂಡುಬುಧವಾರ ನ್ಯಾಯಾಧೀಶರಎದುರು ಹಾಜರುಪಡಿಸಿದ್ದುಪ್ರಸ್ತುತ ಆತನ್ಯಾಯಾಂಗ ಬಂಧನದಲ್ಲಿದ್ದಾನೆ.ಅಂತರ್ ಧರ್ಮೀಯವಿವಾಹಕ್ಕೆ ಪಾಲಕರುಒಪ್ಪಿಕೊಳ್ಳದಿರುವುದರಿಂದ ಇಬ್ಬರುಆತ್ಮಹತ್ಯೆ ಮಾಡಿಕೊಳ್ಳಲುನಿರ್ಧರಿಸಿದ್ದು ಮೊದಲುಸಾಯಿ ಸುರಭಿಬಳಿ ಇದ್ದಮಾತ್ರೆಗಳನ್ನು ಸೇವಿಸುವುದು,ಇದರ ನಡುವೆಯೂಒಂದು ವೇಳೆಯಾರಾದರೂ ಬದುಕಿದರೆನೇಣು ಹಾಕಿಕೊಂಡುಸಾಯುವ ಮಾತುಕತೆನಡೆದಿತ್ತು ಎಂದುಪೊಲೀಸ್ ತನಿಖೆವೇಳೆ ಆರೋಪಿಹೇಳಿದ್ದಾನೆ ಎಂಬಮಾಹಿತಿ ಲಭ್ಯವಾಗಿದೆ.ಕಳೆದ ಜೂ.29ರಂದು ಚಿಕ್ಕಬಳ್ಳಾಪುರತಾಲೂಕಿನ ಮುದ್ದೇನಹಳ್ಳಿಯಲ್ಲಿನಖಾಸಗಿ ಹೋಮ್ಸ್ಟೇ ನಲ್ಲಿಫಿಜಿಯೋಥೆರಪಿಸ್ಟ್ ಸಾಯಿಸುರಭಿ ಮೃತದೇಹಪತ್ತೆಯಾಗಿತ್ತು. ಇದೇಕೊಠಡಿಯಲ್ಲಿ ಸಂಚಿತ್ಆಲಿ ಅಸ್ವಸ್ಥಗೊಂಡುಬಿದ್ದಿದ್ದು ಇಲ್ಲಿನಜಿಲ್ಲಾಸ್ಪತ್ರೆಗೆ ದಾಖಲಿಸಿಆತನಿಗೆ ಚಿಕಿತ್ಸೆಕೊಡಿಸಲಾಗಿತ್ತು.
ಆನ್ ಲೈನ್ಮೂಲಕ ಹೋಮ್ಸ್ಟೇ ನಲ್ಲಿನಕೊಠಡಿಯನ್ನು ಬುಕ್ಮಾಡಿದ್ದ ಆಲಿಪ್ರಿಯತಮೆಯೊಂದಿಗೆ ಉಳಿದುಕೊಂಡಿದ್ದ.ಸೋಮವಾರ ಚೆಕ್ಔಟ್ ಆಗಬೇಕಾಗಿತ್ತು.ಆದರೆ, ಕೊಠಡಿಬಾಗಿಲು ತೆರೆದುಯಾರೂ ಹೊರಬಂದಿಲ್ಲ. ಇದರಿಂದಅನುಮಾನಗೊಂಡು ಸಿಬ್ಬಂದಿಬೀಗ ತೆಗೆದುಒಳಗೆ ಹೋಗಿನೋಡಿದಾಗ ದುರ್ಘಟನೆಯುಬೆಳಕಿಗೆ ಬಂದಿತ್ತು.