ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಕ್ಲಸ್ಟರ್ಮಟ್ಟದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
- ಶಿಕ್ಷಣ ಸಂಯೋಜಕ ನಾಗೇಶ್ ಸಲಹೆ
- ಮಕ್ಕಳ ಪ್ರತಿಭೆ ಹೊರತರಲು ಉತ್ತಮ ವೇದಿಕೆ
- ಸರ್ಕಾರ 2002ರಲ್ಲಿ ಜಾರಿಗೆ
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಪ್ರತಿಭಾ ಕಾರಂಜಿ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿಯೊಬ್ಬರಲ್ಲೂ ಇರುವ ಪ್ರತಿಭೆ ಹೊರಗಡೆ ತೆಗೆಯಲು ನಿರಂತರವಾಗಿ ನಡೆಯಬೇಕು ಎಂದು ಶಿಕ್ಷಣ ಸಂಯೋಜಕ ನಾಗೇಶ್ ಹೇಳಿದರು.
ಏನಿಗದಲೆ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಲಕಲನೇರ್ಪು ಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಚಿಲಕಲನೇರ್ಪು ಸಿಆರ್ಪಿ ರಾಮಚಂದ್ರಪ್ಪ ಮಾತನಾಡಿ, ಸರ್ಕಾರ 2002ರಲ್ಲಿ ಈ ಕಾರ್ಯಕ್ರಮ ಜಾರಿಗೆ ತಂದಿದೆ. ಮಕ್ಕಳ ಪ್ರತಿಭೆ ಹೊರತರಲು ಉತ್ತಮ ವೇದಿಕೆ ಎಂದರು.
ರಾಮಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಬಾಲಾಜಿ ಮಾತನಾಡಿ, ಪ್ರತಿಭಾ ಕಾರಂಜಿ ಉತ್ತಮ ಕಾರ್ಯಕ್ರಮವಾಗಿದ್ದು ಮಕ್ಕಳಲ್ಲಿ ಅಡಗಿದ ಭಯ, ನಾಚಿಕೆ ಸ್ವಭಾವ ದೂರ ಮಾಡುತ್ತದೆ ಎಂದರು.
ಸಂಸತ, ಅರೇಬಿಕ್ ಧಾರ್ಮಿಕ ಪಠಣ, ಕನ್ನಡ, ಇಂಗ್ಲಿಷ್, ಹಿಂದಿ ಭಾಷಣ, ಭಕ್ತೀಗಿತೆ, ಜಾನಪದ ಗೀತೆ, ಭಾವಗೀತೆ ಹಾಡುವ, ಕ್ಲೇ ಮಾಡಲಿಂಗ್, ಛದ್ಮವೇಶ, ಕವ್ವಾಲಿ, ಗಝಲ್, ಜಾನಪದ ನೃತ್ಯ, ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ವಿತರಿಸಲಾಯಿತು. ಕೈವಾರ ಹೋಬಳಿ ಇಸಿಒ ನಾಗೇಶ್, ಬಿಆರ್ಪಿ ನಜುಂಡೇಗೌಡ, ಸುಧಾಕರ್, ಪದ್ಮನಾಭಚಾರಿ, ರಾಜಣ್ಣ, ಸುರೇಶ ಬಾಬು, ಶ್ರೀಧರ್ ಹಿರೇಮಠ್, ಶೋಭಾ, ವಾಣಿ ಮಂಜುನಾಥ್, ಕಲ್ಪನಾ, ನಾಗರಾಜ್ ಇದ್ದರು.