ವಶಪಡಿಸಿಕೊಳ್ಳಲಾದ ಮಾಲು ಹಾಗೂ ಕಳ್ಳನೊಂದಿಗೆ ಪೊಲೀಸರು.  
ಚಿಕ್ಕಬಳ್ಳಾಪುರ

ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಕೂಲಿ ಕಾರ್ಮಿಕನ ಬಂಧನ

ಚಿಕ್ಕಬಳ್ಳಾಪುರ: ಚಿನ್ನಾಭರಣಗಳ ಬೆಲೆ ನಿರಂತರವಾಗಿ ಏರಿಳಿತ ಕಾಣುತ್ತಿದೆ. ಹಾಗೆಯೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಜ್ಯುವೆಲ್ಸರ್ ಅಂಗಡಿಯಲ್ಲಿ ಒಡವೆಗಳನ್ನು ಕದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಚಿಂತಾಮಣಿ ‌ನಗರದ ಕೂಲಿ ಕಾರ್ಮಿಕ ಅರವಿಂದ್ ಕುಮಾರ್ (20 ವರ್ಷ). ಈತನಿಂದ ಕಳವು ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಂತಾಮಣಿ ನಗರದ ಅಜಾದ್ ಚೌಕ್ ಸಮೀಪದ ಶಿವ ಜ್ಯುವೆಲ್ಸರ್ ಅಂಗಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಆರೋಪಿ, 42,200 ರೂ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದ. ಇದಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಶಿವಕುಮಾರ್ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಎಎಸ್ಪಿ ಜಗನ್ನಾಥ್ ರೈ ಹಾಗೂ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ಚಿಂತಾಮಣಿ ನಗರ ಠಾಣೆಯ ಪಿಎಸ್ ಐ ವಿಜಿಕುಮಾರ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಿದ್ದರು. ಇದು ಸಿಸಿ ಕ್ಯಾಮೆರಾ ದೃಶ್ಯ, ಅನುಮಾನಾಸ್ಪಸ ವ್ಯಕ್ತಿಯ ಚಲನವಲನಗಳನ್ನಾಧರಿಸಿ ಆರೋಪಿಯನ್ನು ಬಂಧಿಸಿದೆ.