- ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ಲಿತಾಂಶ
- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಕ್ಯಾತಸಂದ್ರ
- ವೈದ್ಯಳಾಗುವ ಕನಸು
ತುಮಕೂರು: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) 10ನೇ ತರಗತಿ ಪರೀಕ್ಷೆಯಲ್ಲಿ ಕ್ಯಾತಸಂದ್ರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿನಿ ಕೆ.ಎನ್.ಪ್ರಕೃತಿ (Prakruti) ರಾಜ್ಯಕ್ಕೆ 2ನೇ ಟಾಪರ್ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ನಗರದ ಸಿದ್ದರಾಮೇಶ್ವರ ಬಡಾವಣೆ ನಿವಾಸಿ ಬೆಂಗಳೂರು ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಎನ್.ನರಸಿಂಹಮೂರ್ತಿ ಹಾಗೂ ತುಮಕೂರಿನ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ.ಎಸ್.ಅಶ್ವಿನಿ ದಂಪತಿ ಪುತ್ರಿ ಪ್ರಕೃತಿ 1 ರಿಂದ 10ನೇ ತರಗತಿವರೆಗೆ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದಿದ್ದು 498/500 ಅಂಕಗಳಿಸಿ ರಾಜ್ಯಕ್ಕೆ 2ನೇ ಟಾಪರ್ ಆಗಿದ್ದಾರೆ.
ವೈದ್ಯಳಾಗುವ ಕನಸು: ಈಗಾಗಲೇ ಬೆಂಗಳೂರು ಹೊರವಲಯದ ಬೆಳಂದೂರು ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ (ಪಿಸಿಎಂಬಿ)ದಲ್ಲಿ ದಾಖಲಾಗಿರುವ ಕೆ.ಎನ್.ಪ್ರಕೃತಿ ವೈದ್ಯಳಾಗುವ ಕನಸು ಹೊಂದಿದ್ದಾರೆ.