ಚಿಂತಾಮಣಿ ನಗರದ ಬೆಂಗಳೂರು ಜೋಡಿ ರಸ್ತೆಯ ಬೆಂಗಳೂರು ವೃತ್ತದಲ್ಲಿ ರಸ್ತೆಗೆ ಬಿದ್ದ ಕನ್ನಡ ತೋರಣ.
- ಕನ್ನಡ ತೋರಣಗಳು ರಸ್ತೆಯಲ್ಲಿ
- ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತ
- ತಾಲೂಕು ಅಧ್ಯಕ್ಷ ಅಬ್ದುಲ್ ಖಯ್ಯೂಂ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ
ಚಿಂತಾಮಣಿ: ನಗರದ ಬೆಂಗಳೂರು ಜೋಡಿ ರಸ್ತೆಯ ಬೆಂಗಳೂರು ವೃತ್ತದಲ್ಲಿ ಕನ್ನಡ ತೋರಣಗಳು ರಸ್ತೆಯಲ್ಲಿ ಅನಾಥವಾಗಿ ಬಿದ್ದಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯೋತ್ಸವದ ಮುನ್ನಾದಿನದಂದು ನಗರದ ಮುಖ್ಯರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ನಗರಸಭೆ ಕನ್ನಡದ ತೋರಣ ಮತ್ತು ಬಟ್ಟೆಯಲ್ಲಿ ಅಲಂಕರಿಸಿತ್ತು. ಆದರೆ, ಅಳವಡಿಸಿರುವ ಅವುಗಳನ್ನು ತೆರವು ಮಾಡದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿರುವ ಜತೆಗೆ ಎಲ್ಲವೂ ರಸ್ತೆಗೆ ಬಿದ್ದು ಅದರ ಮೇಲೆ ವಾಹನಗಳು ಓಡಾಡುತ್ತಿದ್ದರೂ ನಗರಸಭೆ ಅತ್ತ ಗಮನಹರಿಸಿಲ್ಲವೆಂದು ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ಅಬ್ದುಲ್ ಖಯ್ಯೂಂ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ರಸ್ತೆಯಲ್ಲೇ ಅಧಿಕಾರಿಗಳು, ಕನ್ನಡ ಪರ ಸಂಟನೆಯವರು ಓಡಾಡುತ್ತಿದ್ದರೂ ಬಾವುಟದ ಬಗ್ಗೆ ಗಮನಹರಿಸದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.