ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಸಿಗದೇ ಇಬ್ಬರು ರೋಗಿಗಳು ಮೃತಪಟ್ಟಿರುವ ಪ್ರಕರಣದ ಸಮಗ್ರ ತನಿಖೆ ನಡೆಸಿ, ಇಲಾಖೆ ಅಧಿಕಾರಿಗಳಿಗೆ ವರದಿ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವುಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಸೂಚಿಸಿದೆ.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರ ಚಿಕಿತ್ಸೆ ಸಿಗದೇ ಡಿ.ಕೊತ್ತಪಲ್ಲಿ ಗ್ರಾಮದ ವೆಂಕಟಮ್ಮ ಹಾಗೂ ಮೈನಗಾನಪಲ್ಲಿ ಗ್ರಾಮದ ವೇಣೂಗೋಪಾಲ ಇಬ್ಬರು ರೋಗಿಗಳು ಒಂದೇ ದಿನ ಮೃತಪಟ್ಟಿದ್ದರು.ಇದರ ಬಗ್ಗೆ ವಿಜಯವಾಣಿ ಗಮನ ಸೆಳೆದಿತ್ತು.
ಪ್ರಕರಣದ ತನಿಖೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ.ಶಿಲ್ಪಾ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ.ಮಂಜುನಾಥಚಾರಿ ನೇತೃತ್ವದ ಸಮಿತಿಯನ್ನುರಚಿಸಲಾಗಿದೆ. ಇದು ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಹಠಾತ್ ಬೇಟಿ ನೀಡಿಪರಿಶೀಲಿಸಿತು. ವೈದ್ಯರ ಹಾಗೂ ಸಿಬ್ಬಂದಿ, ರೋಗಿಗಳಸಂಬಂಧಿಕರಿಂದ ಮಾಹಿತಿ ಪಡೆಯಿತು.
ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಮೃತಪಟ್ಟಿರುವ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರ ಆಗಿದೆ. ಇದಕ್ಕೆ ಆಸ್ಪತ್ರೆಗೆ ಭೇಟಿ ನೀಡಿಪರಿಶೀಲಿಸಲಾಗಿದೆ. ಇಲ್ಲಿ ಅವ್ಯವಸ್ಥೆಗಳು ಕಂಡು ಬಂದಿವೆ. ಇಬ್ಬರು ರೋಗಿಗಳು ಮೃತಪಟ್ಟಿರುವುದಕ್ಕೆ ಕಾರಣ ಏನು? ಎಂಬುದರ ಬಗ್ಗೆ ಆಸ್ಪತ್ರೆ ಅಡಳಿತಾಧಿಕಾರಿ ಹಾಗೂ ವೈಧ್ಯರಿಂದ ಮಾಹಿತಿ ಪಡೆದುಕೊಳ್ಳಲಾಗಿದೆಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ.ಶಿಲ್ಪಾ ತಿಳಿಸಿದ್ದಾರೆ.