ಭಾರತೀಯ ಸೇನೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ವಾಪಾಸ್ ಆದ ಗೌರಿಬಿದನೂರು ನಗರದ ವೀರಂಡಣಹಳ್ಳಿ ವಾಸಿ ಜಿ.ಸಿ.ಕೃಷ್ಣಪ್ಪ ಅವರನ್ನು ಸ್ವಾಗತಿಸಲಾಯಿತು. ವಾಣಿಜ್ಯೋದ್ಯಮಿ ಇ.ಎಸ್.ರಮೇಶ್, ನಗರ ಪೊಲೀಸ್ ಠಾಣೆ ಪಿಎಸ್ಐ ವರಲಕ್ಷಿ$್ಮ, ವೀರ ನಮನ ತಂಡದ ನವೀನ್ ಇದ್ದರು.
- ಸೇನೆಗೆ ಸೇರಿ ದೇಶಕ್ಕೆ ಕೊಡುಗೆ ನೀಡಿ
ಸೇನೆಗೆ ಸೇರಿ ದೇಶಕ್ಕೆ ಕೊಡುಗೆ ನೀಡಿ
ಗೌರಿಬಿದನೂರು: ಭಾರತೀಯ ಸೇನೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಗರದ ವೀರಂಡಣಹಳ್ಳಿ ವಾಸಿ ಜಿ.ಸಿ.ಕೃಷ್ಣಪ್ಪ ಅವರನ್ನು ಸ್ವಾಗತಿಸಲಾಯಿತು. ಎಂ.ಜಿ ವೃತದಲ್ಲಿ ಸನ್ಮಾನಿಸಿ ನಂತರ ಬಿ.ಎಚ್ ರಸ್ತೆ ಮೂಲಕ ವೀರಂಡಣಹಳ್ಳಿ ನಿವಾಸದವರೆಗೆ ಮೆರವಣಿಗೆ ನಡೆಸಲಾಯಿತು.
ವಾಣಿಜ್ಯೋದ್ಯಮಿ ಇ.ಎಸ್.ರಮೇಶ್ ಮಾತನಾಡಿ, ಸತ್ಯಾಗ್ರಹ ಚಳಚಳಿಯಲ್ಲಿ ಅನೇಕ ಮಂದಿ ಪ್ರಾಣ ಅರ್ಪಿಸಿದ ತಾಲೂಕಿನ ವಿದುರಾಶ್ವತ್ಥವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗುತ್ತಿದೆ. ಇದು ಅನೇಕರಿಗೆ ಪ್ರೇರಣೆಯಾಗಿದ್ದು, ಇಂದಿಗೂ ತಾಲೂಕಿನ ಅನೇಕ ಮಂದಿ ಸೇನೆಗೆ ಸೇರುವ ಮೂಲಕ ದೇಶ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಪಿಎಸ್ಐ ವರಲಕ್ಷಿ$್ಮ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಅಸಂಖ್ಯಾತ ಜನರ ಕನಸಾಗಿದೆ. ಎಲ್ಲರಿಗೂ ಇಂತಹ ಸದಾವಕಾಶ ಸಿಗುವುದಿಲ್ಲ. ಸೇನೆಯಲ್ಲಿ 33 ವರ್ಷಗಳ ಕಾಲ ಯಶಸ್ವಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿರುವ ಇವರು ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಜಿ.ಸಿ.ಕೃಷ್ಣಪ್ಪ ಮಾತನಾಡಿ, ನನ್ನ 33 ವರ್ಷಗಳ ಸೇವಾ ಅವಧಿಯಲ್ಲಿ ದೇಶಕ್ಕಾಗಿ ನನ್ನ ಕುಟುಂಬ ಮತ್ತು ಯೌವ್ವನದ ಜೀವನವನ್ನು ಬದಿಗೊತ್ತಿ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸಿದ್ದೇನೆ. ವೃತ್ತಿ ಜೀವನದಲ್ಲಿ ಎಂದೂ ಕಾಣದ ಕಂಡರಿಯದ ರೀತಿಯಲ್ಲಿ ಇಂದು ನನ್ನನ್ನು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದ್ದಕ್ಕೆ ನಾನು ಎಲ್ಲರಿಗೂ ಚಿರಯಣಿಯಾಗಿರುತ್ತೇನೆ ಎಂದು ಹೇಳಿದರು. ಮುನಿರಾಜು, ರಾಜಣ್ಣ, ವೆಂಕಟ್, ಸಾಮಿಲ್ ಅರುಣಾ, ವಿಜಯ್, ಮಹದೇವ್, ಸುಬ್ಬು ಇದ್ದರು.