ಚಿಂತಾಮಣಿ ನಗರದ ಪಾದಚಾರಿ ರಸ್ತೆಯಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್ಗಳು ಭರ್ಜರಿಯಾಗಿ ಮಾರಾಟ ಮಾಡುತ್ತಿರುವುದು.
- ಬೀದಿಬದಿಯಲ್ಲಿ ಕಳಪೆ ಹೆಲ್ಮೆಟ್ಗಳ ಮಾರಾಟವೂ ಜೋರಾಗಿದೆ.
- ಡಿ.12ರಿಂದ ಹೆಲ್ಮೆಟ್ ಧರಿಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ಪ್ರಚಾರ
- ಅರ್ಧ ಹೆಲ್ಮೆಟ್ ಧರಿಸಿದರೆ ಅಪಘಾತ
ಚಿಂತಾಮಣಿ: ಬೀದಿಬದಿಯಲ್ಲಿ ಕಳಪೆ ಹೆಲ್ಮೆಟ್ಗಳ ಮಾರಾಟವೂ ಜೋರಾಗಿದೆ. ಜಿಲ್ಲೆಯಾದ್ಯಂತ ಶುಕ್ರವಾರದಿಂದ ಬೈಕ್ ಚಾಲಕ, ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 1 ವಾರದಿಂದ ನಗರ, ಗ್ರಾಮೀಣದಲ್ಲಿ ಡಿ.12ರಿಂದ ಹೆಲ್ಮೆಟ್ ಧರಿಸುವ ಬಗ್ಗೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಇಲಾಖೆಯಿಂದ ಪ್ರಚಾರ ನಡೆಸಿದ್ದರಿಂದ ಹೆಲ್ಮೆಟ್ ಬಳಕೆ ಹೆಚ್ಚಾಗಿದೆ. ಪೊಲೀಸರು ಕಾರ್ಯಾಚರಣೆ ಬಿಗಿಗೊಳಿಸಿದರಿಂದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ. ಹೆಲ್ಮೆಟ್ಗಾಗಿ ಶೋರೂಮ್, ಅಂಗಡಿಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ನಗರದ ತಹಸೀಲ್ದಾರ್, ಬೆಂಗಳೂರು, ಚೇಳೂರು ವೃತ್ತದ ಬೀದಿಬದಿಯಲ್ಲಿ ವ್ಯಾಪಾರಿಗಳು ಹೆಲ್ಮೆಟ್ ಮಾರಾಟ ಮಾಡುತ್ತಿದ್ದು ಮೊದಲ ದಿನ ಹೆಲ್ಮೆಟ್ ಲಭಿಸಿದರೆ ಸಾಕು. ಆನಂತರ ಗುಣಮಟ್ಟದ ಹೆಲ್ಮೆಟ್ ಖರೀದಿ ಮಾಡೋಣ ಎಂದು ಗುಣಮಟ್ಟ ಲೆಕ್ಕಿಸದೆ ಬೀದಿಬದಿ ಹೆಲ್ಮೆಟ್ ಖರೀದಿಸುತ್ತಿದ್ದಾರೆ. ಇನ್ನು ಕಳಪೆ, ಅರ್ಧ ಹೆಲ್ಮೆಟ್ ಧರಿಸಿದರೆ ಅಪಘಾತ ಸಂಭವಿಸಿದಾಗ ಪ್ರಾಣ ಹಾನಿ ಸಾಧ್ಯತೆಯಿದೆ. ಕಳಪೆ ಹೆಲ್ಮೆಟ್ ಮಾರಾಟಗಾರರಿಗೆ ಪೊಲೀಸರು, ಸಾರಿಗೆ, ಕಾನೂನು ಮಾಪನಾ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿಬೇಕಾಗಿದೆ.