ಚಿಂತಾಮಣಿ: ಪ್ರೀತಿಸಿ ಮದುವೆಯಾದ ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾನೆ.
ಚಿಂತಾಮಣಿ ತಾಲೂಕಿನ ಕೈವಾರದ ಯೋಗಿಣಿ (೨೫) ಕೊಲೆಯಾದ ದುರ್ದೈವಿ. ಕೈವಾರ ಹೋಬಳಿಯ ಬ್ಯಾಲಹಳ್ಳಿಯ ಗಣೇಶ್ (೩೦) ಆರೋಪಿ. ಈತ ಹೆಂಡತಿ ನಡತೆಯ ಬಗ್ಗೆ ಆಗಾಗ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದರ ನಡುವೆ ಮಾಲೂರು ತಾಲೂಕಿನ ಮಿಂಡಹಳ್ಳಿ ನರ‍್ಜನ ಪ್ರದೇಶದಲ್ಲಿ ಚಾಕುವಿನಿಂದ ಕುತ್ತಿಗೆ ಕುಯ್ದು ರ‍್ಬರವಾಗಿ ಕೊಲೆ ಮಾಡಿದ್ದಾನೆ. ಕೊನೆಗೆ ಪೊಲೀಸ್ ಠಾಣೆಗೆ ಖುದ್ದು ತೆರಳಿ ಶರಣಾಗಿದ್ದಾನೆ. ಮಾಲೂರು ಪೊಲೀಸರು ಮೃತದೇಹವನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ಸಾಗಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಯೋಗಿಣಿ ಹಾಗೂ ಗಣೇಶ್ ನಡುವಿನ ಕಾಲೇಜು ದಿನಗಳ ಸ್ನೇಹದ ಪರಿಚಯವು ಸಾಮಾಜಿಕ ಜಾಲತಾಣದ ಮೂಲಕ ಮತ್ತಷ್ಟು ಗಾಢವಾಗಿದೆ. ಪಾಲಕರ ವಿರೋಧದ ನಡುವೆಯೂ ಹಿರಿಯರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಹಾಗೆಯೇ ಬೆಂಗಳೂರಿನ ಆವಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದಂಪತಿಗೆ ಒಂದೂ ವರೆ ರ‍್ಷದ ಹೆಣ್ಣು ಮಗು ಇದೆ.