ಚಿಂತಾಮಣಿ ನಗರದ 23ನೇ ವಾರ್ಡ್​ನ ನೆಕ್ಕುಂದಿ ಪೇಟೆಯ ಗಾಣಿಗರ ಓಣಿಯ ಕೃಷ್ಣಸಿಂಗ್​ ಮನೆಯಲ್ಲಿ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ ಸಂಭವಿಸಿ ಫ್ರಿಡ್ಜ್​ ಸುಟ್ಟಿರುವುದು. 
ಚಿಕ್ಕಬಳ್ಳಾಪುರ

ಶಾರ್ಟ್​ಸಕ್ಯೂರ್ಟ್​ನಿಂದ ಅಪಾರ ಹಾನಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ನಿಂದ ಲಕ್ಷಾಂತರ ರೂ. ಹಾನಿ
  • ಮನೆಯಲ್ಲಿ ಫ್ರಿಡ್ಜ್​, ಗೃಹಪಯೋಗಿ ವಸ್ತುಗಳು ಸೇರಿ ವೈರಿಂಗ್​ ಸಂಪೂರ್ಣ ಹಾನಿ
  • ಕಪ್ಪು ಬಣ್ಣಕ್ಕೆ ತಿರುಗಿದ ಮನೆ
ಚಿಂತಾಮಣಿ: ನಗರದ 23ನೇ ವಾರ್ಡಿನ ನೆಕ್ಕುಂದಿ ಪೇಟೆಯ ಗಾಣಿಗರ ಓಣಿಯಲ್ಲಿರುವ ಕೃಷ್ಣಸಿಂಗ್​ ಅವರ ಬಾಡಿಗೆ ಮನೆಯಲ್ಲಿ ಭಾನುವಾರ ಸಂಭವಿಸಿದ ಯಾಗಿದೆ. ಮನೆಯಲ್ಲಿ ಫ್ರಿಡ್ಜ್​, ಗೃಹಪಯೋಗಿ ವಸ್ತುಗಳು ಸೇರಿ ವೈರಿಂಗ್​ ಸಂಪೂರ್ಣವಾಗಿ ಸುಟ್ಟು ಇಡೀ ಮನೆ ಕಪು$್ಪ ಬಣ್ಣಕ್ಕೆ ತಿರುಗಿದೆ. ಅಗ್ನಿಶಾಮಕ ದಳದ ಅಧಿಕಾರಿ ಲೋಕೇಶ್​, ಸಿಬ್ಬಂದಿ ವೆಂಕಟ್​ ಶಿವಾರೆಡ್ಡಿ, ವಿಷ್ಣು, ವಿವೇಕ್​, ನಾಗರಾಜ್​ ಬೆಂಕಿ ನಂದಿಸಿದರು. ಮನೆಯ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್​ ವೈರಿಂಗ್​, ವಿವಿಧ ಗೃಹಪಯೋಗಿ ವಸ್ತುಗಳು ಸುಟ್ಟಿವೆ. ಬೆಸ್ಕಾಂನ ಎಇ ಜಗದೀಶ್​, ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ಕೋತಿ ಕಾಟಕ್ಕೆ ವಿದ್ಯುತ್​ ತಂತಿಗಳು ತಾಗಿ ಸಕ್ಯೂರ್ಟ್​ ಸಂಭವಿಸಿದೆ ಎನ್ನಲಾಗಿದೆ.