ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಲಸಿಕೆ ಹಾಕಲಾಯಿತು 
ಚಿಕ್ಕಬಳ್ಳಾಪುರ

ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟಲು ಎಚ್.ಪಿ.ವಿ ಲಸಿಕಾಕರಣ

ಚಿಕ್ಕಬಳ್ಳಾಪುರ: ಗರ್ಭಕಂಠದ ಕ್ಯಾನ್ಸರ್‌ತಡೆಗಟ್ಟಲು ಜಿಲ್ಲೆಯಲ್ಲಿ ಎಚ್.ಪಿ.ವಿ ಲಸಿಕಾಕರಣ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ದಿನನಿತ್ಯದ ರೋಗ ನಿರೋಧಕ ಶಕ್ತಿ ವೃದ್ಧಿ, ಎಂಆರ್‌ ನಿರ್ಮೂಲನೆ ಹಾಗೂ ಗರ್ಭಕಂಠದಕ್ಯಾನ್ಸರ್‌ ತಡೆಗಟ್ಟುವ ಮೂಲಕ ಜಿಲ್ಲೆಯ ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲುಸುರಕ್ಷಿತ ಲಸಿಕೆ ಅಭಿಯಾನ ಕೈಗೊಳ್ಳಲಾಗಿದೆ.

ಎಚ್.ಪಿ.ವಿ ಲಸಿಕೆಯು ಹೆಣ್ಣು ಮಕ್ಕಳಲ್ಲಿಗರ್ಭಕಂಠದ ಕ್ಯಾನ್ಸರ್‌ನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ. ಯಾವುದೇ ಅಡ್ಡ ಪರಿಣಾಮಇರುವುದಿಲ್ಲ. ಪ್ರತಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ ಪಿವಿ ಲಸಿಕೆಯನ್ನು ಉಚಿತವಾಗಿಹಾಕಲಾಗುತ್ತದೆ.

ಜಿಲ್ಲೆಯಲ್ಲಿ ಸಮೀಕ್ಷಾ ವರದಿಯಂತೆ ೧೪ವರ್ಷದೊಳಗಿನ 13,432 ಹೆಣ್ಣು ಮಕ್ಕಳಿದ್ದಾರೆ. ಇವರಿಗೆ ಲಸಿಕೆ ಹಾಕುವನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಇದಕ್ಕೆ ಈಗಾಗಲೇ ಜಿಲ್ಲೆಗೆ 4,830 ಡೋಸ್ ಲಸಿಕೆ ಬಂದಿದ್ದು ಸುರಕ್ಷತಾ ಕ್ರಮಗಳೊಂದಿಗೆ ಆಯಾ ಆರೋಗ್ಯಸಂಸ್ಥೆಗಳಿಗೆ ಪೂರೈಸಲಾಗಿದೆ. ಎರಡನೇ ಹಂತದಲ್ಲಿ ಉಳಿದ ಪ್ರಮಾಣದ ಲಸಿಕೆಗಳುತರಿಸಿಕೊಳ್ಳಲಾಗುತ್ತದೆ.

ಪ್ರತಿ ಬುಧವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾಆಸ್ಪತ್ರೆಯಲ್ಲಿ ಉಚಿತವಾಗಿ ಎಡ ಕೈಯ ತೋಳಿನ ಸ್ನಾಯುಗೆ ಲಸಿಕೆಯನ್ನು (ಇಂಟ್ರಾಮಸ್ಕುಲರ್) ಹಾಕಲಾಗುತ್ತದೆ. ಈ ನಿಟ್ಟಿನಲ್ಲಿಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.