ಚಿಕ್ಕಬಳ್ಳಾಪುರದ ಗೃಹ ಕಚೇರಿಯಲ್ಲಿ ಸಂಸದ ಡಾ ಕೆ.ಸುಧಾಕರ್ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದ ಸಂದರ್ಭ. 
ಚಿಕ್ಕಬಳ್ಳಾಪುರ

ಗೃಹ ಸಚಿವರ ಆರ್‌ ಎಸ್‌ ಎಸ್‌ ಜಪ, ಕೈ ವರಿಷ್ಠರ ಮನ್ನಣೆ ಲೆಕ್ಕಾಚಾರ

ಎನ್.ವೆಂಕಟೇಶ್

ಚಿಕ್ಕಬಳ್ಳಾಪುರ: ರಾಜ್ಯ ಗೃಹ ಸಚಿವ ಪ್ರಿಯಾಂಕ್ಖರ್ಗೆ ಸ್ವಪಕ್ಷೀಯವರಿಷ್ಠ ನಾಯಕ ರಾಹುಲ್ಗಾಂಧಿ ಬಳಿಹಿರಿಯ ನಾಯಕರಾಗಿ ಗುರುತಿಸಿಕೊಳ್ಳಲು ಆರ್‌ ಎಸ್‌ ಎಸ್‌ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದುಸಂಸದ ಡಾ.ಕೆ.ಸುಧಾಕರ್ವ್ಯಂಗ್ಯವಾಡಿದ್ದಾರೆ.

ಈಗಾಗಲೇ ಅವರ ತಂದೆ ಮಲ್ಲಿಕಾರ್ಜುನ ಖರ್ಗೆರಾಹುಲ್ಗಾಂಧಿ ಗಮನಸೆಳೆದು, ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ ಸಚಿವ ಪ್ರಿಯಾಂಕ್ಖರ್ಗೆ ಕೂಡ ವರಿಷ್ಠರಹಂತದಲ್ಲಿನ ದೊಡ್ಡ ಗುರುತಿಗಾಗಿ ಆರ್‌ ಎಸ್‌ ಎಸ್ ನೋಂದಣಿವಿಚಾರದ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ನಗರದಲ್ಲಿನ ಸ್ವಗೃಹ ಕಚೇರಿಯಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.

ಆರ್ಎಸ್ಎಸ್ಬಗ್ಗೆರಾಜ್ಯ ಗೃಹ ಸಚಿವರು ಇಷ್ಟು ಉತ್ಸುಕತೆ ತೋರುವ ಅಗತ್ಯ ಇರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅನೇಕಭಜನಾ ಮಂಡಳಿಗಳಿವೆ, ವಿವಿಧಧರ್ಮಗಳಲ್ಲಿ ಸಾಕಷ್ಟು ಸಂಘಗಳಿವೆ. ಕ್ರೀಡಾಕೂಟಗಳಲ್ಲೂಸಹ ಸಂಘಗಳನ್ನು ಕಾಣಬಹುದು. ಈ ಎಲ್ಲವೂ ನೋಂದಣಿ ಮಾಡಿಸುವುದಿಲ್ಲಎಂದಿದ್ದಾರೆ.

ಸಂವಿಧಾನದ ʼ19 (1) (ಸಿಪ್ರಕಾರ ಯಾರು ಬೇಕಾದರೂ ಸಂಘ ರಚಿಸಬಹುದು. ನೂರು ವರ್ಷ ಪೂರೈಸಿರುವ ಆರ್ಎಸ್ಎಸ್ಮೊದಲಿನಿಂದಲೂ ರಾಷ್ಟ್ರ ನಿರ್ಮಾಣ, ವ್ಯಕ್ತಿತ್ವ ವಿಕಸನದ, ದೇಶದಅಭಿವೃದ್ಧಿಗೆ ಪೂರಕವಾದ ಕೆಲಸಗಳಲ್ಲಿ ತೊಡಗಿದೆ. ಇಂತಹ ಸಂಸ್ಥೆಯ ವಿಚಾರವಾಗಿ ಅಪನಂಬಿಕೆ,ರಾಜಕೀಯ ಬೆರೆಸುವ ಪ್ರಯತ್ನವುಸಚಿವ ಪ್ರಿಯಾಂಕ್ಖರ್ಗೆಯಅನುಭವ, ವಯಸ್ಸು ಹಾಗೂ ಸ್ಥಾನಮಾನಕ್ಕೆ ಸರಿ ಹೊಂದುವುದಿಲ್ಲ ಎಂದುವ್ಯಂಗ್ಯವಾಡಿದ್ದಾರೆ.