ಚಿಕ್ಕಬಳ್ಳಾಪುರ: ನಿರ್ದಯಿಯಾಗಿ 40 ದಿನದ ಹಸುಗೂಸು ಮರಿ ಮೊಮ್ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದ ವೃದ್ಧೆಯನ್ನು ಚೇಳೂರುಪೊಲೀಸರು ಬಂಧಿಸಿದ್ದಾರೆ.
ಚೇಳೂರಿನ ಮೆಹಬೂಬಿ (72)ಆರೋಪಿ. ಅನ್ಯ ಧರ್ಮದ ಯುವಕನ್ನು ಮದುವೆಯಾಗಿ ಗರ್ಭಿಣಿಯಾಗಿ ಮನೆಗೆ ಬಂದಿದ್ದ ಮೊಮ್ಮಗಳುವಿಚಾರವಾಗಿ ಮೆಹಬೂಬಿ ಬೇಸರಗೊಂಡಿದ್ದರು. ಮಗು ಜನನವಾಗುತ್ತಿದ್ದಂತೆ ಸಮಯ ನೋಡಿಕೊಂಡು ಕತ್ತುಹಿಸುಕಿ ಕೊಲೆ ಮಾಡಿದ್ದರು. ಇದನ್ನರಿಯದೇ ಅನಾರೋಗ್ಯದ ಹಿನ್ನೆಲೆಯಲ್ಲಿ 40 ದಿನದ ಹಸುಗೂಸುಮೃತಪಟ್ಟಿದೆ ಎಂದು ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
ಮಗುವಿನ ಸಾವಿನ ಬಗ್ಗೆಅನುಮಾನ ವ್ಯಕ್ತಪಡಿಸಿ ತಾಯಿ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ತಹಸೀಲ್ದಾರ್‌ಸಮ್ಮುಖದಲ್ಲಿ ಸ್ಮಶಾನದಲ್ಲಿ ಹೂತ್ತಿದ್ದ ಹಸುಗೂಸಿನ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆನಡೆಸಿದ್ದು ಇದರ ಜತೆಗೆ ಎಫ್ ಎಸ್ ಎಲ್ ವರದಿಯಲ್ಲಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಇದರಿಂದವೃದ್ಧೆಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದು ಆಕೆ ಕೊಲೆ ಮಾಡಿರುವುದನ್ನುಒಪ್ಪಿಕೊಂಡಿದ್ದಾಳೆ.