ಯುಗಾದಿ ಮಾಸಿಕ ಸಂತೆ ಹಾಗೂ ಮಾರಾಟ ಮೇಳ 
ಚಿಕ್ಕಬಳ್ಳಾಪುರ

ಯುಗಾದಿ ಮಾಸಿಕ ಸಂತೆ ಹಾಗೂ ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ:ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವನಿಟ್ಟಿನಲ್ಲಿ ಕೈಗೊಂಡಿದ್ದ ಯುಗಾದಿ ಮಾಸಿಕ ಸಂತೆ ಹಾಗೂ ಮಾರಾಟ ಮೇಳಕ್ಕೆ ಉತ್ತಮಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಮೂರುದಿನದಲ್ಲಿ 4 ಸಾವಿರ ಅಕ್ಕಕಿಟ್ ಗಳ ಮಾರಾಟವಾಗಿದ್ದು 25 ಲಕ್ಷಕ್ಕೂ ಹೆಚ್ಚಿನ ಆದಾಯ ಸ್ವಸಹಾಯ ಸಂಘಗಳಿಗೆ ಲಭಿಸಿದೆ.

ಯುಗಾದಿ ಹಾಗೂ ರಂಜಾನ್ ಹಬ್ಬದ ಅಂಗವಾಗಿಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿ.ಪಂ ಹಾಗೂ ಸಂಜೀವಿನಿ-ಡೇ ಎನ್.ಆರ್.ಎಲ್.ಎಂ. ಯೋಜನೆಯವತಿಯಿಂದ ಜಿಲ್ಲೆಯ ೧೦ ಕಡೆ ಮಾಸಿಕ ಸಂತೆಯನ್ನು ಕೈಗೊಳ್ಳ ಳಾಗಿತ್ತು.

ಜಿಲ್ಲೆಯ 12 ಗ್ರಾ.ಪಂ.ಗಳ 24 ಕ್ಕೂ ಹೆಚ್ಚು ಸ್ವ ಸಹಾಯ ಗುಂಪುಗಳಿಂದ 250ಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನೊಳಗೊಂಡ ತಂಡವು ಯುಗಾದಿಗೆ ಅಕ್ಕ ಹೋಳಿಗೆ ಕಿಟ್ ಅನ್ನು ತಯಾರಿಸಿದ್ದುತೊಗರಿಬೇಳೆ, ಹೆಸರುಬೇಳೆ, ಗಾಣದ ಕಡಲೇ ಕಾಯಿ ಎಣ್ಣೆ , ಮೈದಾ ಹಿಟ್ಟು, ಆರ್ಗಾನಿಕ್ ಬೆಲ್ಲ, ತುಪ್ಪ, ಹೋಮ್ ಮೇಡ್ ಹಪ್ಪಳ, ತೆಂಗಿನಕಾಯಿ, ಗಾಣದ ಹರಳೆಣ್ಣೆ, ಸೀಗೇಕಾಯಿ ಪುಡಿ, ತುಪ್ಪ ಸೇರಿದಂತೆ ಇತರೆ ಪೌಷ್ಠಿಕಾಂಶ ಪದಾರ್ಥಗಳನ್ನೊಳಗೊಂಡಈ ಕಿಟ್‌ ಅನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದಾರೆ.

ಜಿಲ್ಲಾದ್ಯಂತಕೈಗೊಂಡಿದ್ದ "ಸಂಜೀವಿನಿ ಯುಗಾದಿ ಮಾಸಿಕ ಸಂತೆಗೆಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಂಬರುವ ದಿನಗಳಲ್ಲೂ ಹಬ್ಬಗಳ ಆಚರಣೆಯ ಸಂದರ್ಭದಲ್ಲಿಇಂತಹ ಮೇಳವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಎನ್ಆರ್.ಎಲ್ಎಂ ಯೋಜನೆಯಡಿ ಜಿಲ್ಲೆಯಲ್ಲಿ ಸ್ವ ಸಹಾಯ ಸಂಘಗಳ ಮಹಿಳೆಯರು ವಿವಿಧ ಸ್ವ ಉದ್ದಿಮೆಗಳನ್ನು ಕೈಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇಂತಹಗುಂಪಿನ ಸದಸ್ಯರುಗಳು ನಿರ್ವಹಿಸುವ ಉದ್ದಿಮೆಗಳಿಂದಸ್ಥಳೀಯವಾಗಿತಯಾರಿಸಿದ ಉತ್ಕೃಷ್ಟ ಗುಣಮಟ್ಟದ ಸಾವಯವ ಉತ್ಪನ್ನಗಳು, ವಿವಿಧ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳುಹಾಗೂ ಗೃಹೋಪಯೋಗಿ ವಸ್ತುಗಳು, ಖಾದಿ ಬಟ್ಟೆಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಿ ಆದಾಯ ಗಳಿಸುವ, ರಿಯಾಯಿತಿ ದರದಲ್ಲಿ ಖರೀದಿಯಿಂದ ಗ್ರಾಹಕರಿಗೆ ಅನುಕೂಲವಾಗುವ ಉದ್ದೇಶದೊಂದಿಗೆ ಮಾಸಿಕ ಸಂತೆಯನ್ನು ಕೈಗೊಳ್ಳಲಾಗಿದೆ.