ಗೌರಿಬಿದನೂರು ನಗರದ ಹಿರೇಬಿದನೂರು ಅಂಗನವಾಡಿ ಕೇಂದ್ರ, ಪರಿಶಿಷ್ಟ ವರ್ಗಗಳ ಮೆಟ್ರಿಕ್​ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಡಾ.ಜಿ.ಪ್ರಭು, ಜಿಪಂ ಸಿಇಒ ನವೀನ್​ ಭಟ್​, ಎಸಿ ಅಶ್ವಿನ್​ ಇತರರು ಇದ್ದರು.  
ಚಿಕ್ಕಬಳ್ಳಾಪುರ

ಸರ್ಕಾರಿ ಸೌಲಭ್ಯ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ

ಚಿಕ್ಕಬಳ್ಳಾಪುರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಸೌಲಭ್ಯ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ
ಸರ್ಕಾರಿ ಸೌಲಭ್ಯ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ
ಗೌರಿಬಿದನೂರು: ನಗರದ ಹಿರೇಬಿದನೂರು ಅಂಗನವಾಡಿ ಕೇಂದ್ರ, ಪರಿಶಿಷ್ಟ ವರ್ಗಗಳ ಮೆಟ್ರಿಕ್​ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಭೇಟಿ ನೀಡಿ
ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ವಸತಿ ನಿಲಯದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದಾಖಲಾಗಿದ್ದು, ವಿದ್ಯಾರ್ಥಿಗಳಿಂದ ಮೂಲ ಸೌಲಭ್ಯ ಮತ್ತು ಕೋಣೆ, ನಿತ್ಯ ನೀಡುವ ಊಟದ ಕುರಿತು ಮಾಹಿತಿ ಪಡೆದರು. ಜತೆಗೆ ತಾವು ಮಾಡುತ್ತಿರುವ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಕಲೆಹಾಕಿದ ಉಸ್ತುವಾರಿ ಕಾರ್ಯದರ್ಶಿಯವರು, ನಿಲಯದ ಸೌಲಭ್ಯಗಳನ್ನು ಪಡೆದು ಉತ್ತಮ ಶಿಣ ಪಡೆಯಬೇಕು ಎಂದು ಕರೆ ನೀಡಿದರು.
ಶ್ರೀ ರಾಮನವಮಿ ಅಂಗವಾಗಿ ಶುಕ್ರವಾರ ವಸತಿ ನಿಲಯದಲ್ಲಿ ಹಬ್ಬದ ಊಟವನ್ನು ಮಾಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಪಾನಕ ಹೆಸರು ಬೇಳೆ, ಬಜ್ಜಿ ಸವಿದರು. ನಿಲಯದ ಸ್ವಚ್ಛತೆ ಮತ್ತು ನಿರ್ವಹಣೆಯ ಬಗ್ಗೆ ಮಂಜುಳಾ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಹಿರೇಬಿದನೂರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿದರು. ಅಲ್ಲಿನ ಆಹಾರ ಪದಾರ್ಥಗಳನ್ನು ಪರಿಶೀಲನೆ ನಡೆಸಿದರು. ಅಕ್ಕಿ, ಬೇಳೆಕಾಳು ಸೇರಿದಂತೆ ಇತರ ವಸ್ತುಗಳು, ಆಹಾರ ತಯಾರಿಸುವ ಅಡುಗೆ ಕೋಣೆಪರಿಶೀಲಿಸಿದರು.
ಅಲ್ಲದೆ, ಮಕ್ಕಳ ದಾಖಲೆಗಳನ್ನು ಸರಿಯಾಗಿ ಇಡಬೇಕು. ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಶಿಶು ಅಭಿವೃದ್ಧಿ ಅಧಿಕಾರಿ ರವಿ ಅವರಿಗೆ ಸೂಚನೆ ನೀಡಿದರು.
ಉಸ್ತುವಾರಿ ಕಾರ್ಯದರ್ಶಿಗಳು ತಾಲೂಕಿನ ಹೊಸೂರು ವಿಾನ ಪ್ರಾದೇಶಿಕ ಉಪ ಕೇಂದ್ರಕ್ಕೆ ಭೇಟಿ ನೀಡಿ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನೋಡಲ್​ ಅಧಿಕಾರಿ ಶ್ರೀನಿವಾಸ್​ ಅವರಿಂದ ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಡಾ.ಜಿ.ಪ್ರಭು, ಜಿಪಂ ಸಿಇಒ ನವೀನ್​ ಭಟ್​, ಎಸಿ ಅಶ್ವಿನ್​, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರವಿಣ್​ ಪಾಟೀಲ್​, ತಹಸೀಲ್ದಾರ್​ ಅರವಿಂದ್​, ತಾಪಂ ಇಒ ಜಿ.ಕೆ. ಹೊನ್ನಯ್ಯ, ಪೌರಾಯುಕ್ತ ರಮೇಶ್​, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನರಸಿಂಹಯ್ಯ, ವಸತಿ ನಿಲಯದ ಮೇಲ್ವಿಚಾರಕಿ ಸುಕನ್ಯಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
27 ಜಿಬಿಡಿ 3, 3ಎ
.