ವ್ಯಕ್ತಿಯ ಮೇಲೆ ಪುಂಡರಿಂದ ಹಲ್ಲೆ  
ಚಿಕ್ಕಬಳ್ಳಾಪುರ

ಮುಂಜಾವದಲ್ಲಿ ಮಾರಕ ಆಯುಧಗಳನ್ನು ತೋರಿಸಿ ಹಲ್ಲೆಗೈದ ಅಪ್ರಾಪ್ತರ ತಂಡ

ಎನ್.ವೆಂಕಟೇಶ್

ಚಿಕ್ಕಬಳ್ಳಾಪುರ:ತಾಲೂಕಿನ ನಂದಿಗಿರಿಧಾಮಠಾಣೆಯ ಕೂಗಳತೆಯದೂರದಲ್ಲಿ ದರೋಡೆಪ್ರಕರಣಗಳು ನಿರಂತರವಾಗಿನಡೆಯುತ್ತಿದ್ದು ಬುಧವಾರಮುಂಜಾವದಲ್ಲಿ ಪುಂಡಗುಂಪು ಲಾಂಗು,ಮಚ್ಚು ತೋರಿಸಿಹಣ ಸುಲಿಗೆಗೆಯತ್ನಿಸಿದೆ.
ಗುಂಪಿನಿಂದ ಹಲ್ಲೆಗೊಳಗಾದವ್ಯಕ್ತಿ ದೊಡ್ಡಮಾರಪ್ಪ(52). ಆತನ ಅಂಗಿಯನ್ನುಹರಿದು ಹಾಕಿರುವಪುಂಡರು, ಹಣಸಿಗದಿದ್ದರಿಂದ ಕೋಪಗೊಂಡುಹಲ್ಲೆ ನಡೆಸಿದ್ದಾರೆ.ಅವಾಚ್ಯ ಶಬ್ದಗಳಿಂದನಿಂದಿಸಿದ್ದಾರೆ.

*ಪ್ರಕರಣದಹಿನ್ನೆಲೆ*
ತಾಲೂಕಿನ ನಂದಿಕ್ರಾಸ್ ನಲ್ಲಿನರವಿ ದಿನಸಿಅಂಗಡಿ ಸಮೀಪದದಿನಪತ್ರಿಕೆ ಹಂಚಿಕೆಯಸ್ಥಳದಲ್ಲಿ ಬುಧವಾರಮುಂಜಾವ ಬಂದುಕುಳಿತುಕೊಂಡಿದ್ದರು. ಏಜೆಂಟ್ಬಂದ ಬಳಿಕಬಂಡಲ್ ನಿಂದದಿನಪತ್ರಿಕೆ ಪಡೆಯಲುಎದುರು ನೋಡುತ್ತಿದ್ದರು.ಇದೇ ವೇಳೆಮೂವರು ಅಪ್ರಾಪ್ತರುಕೈಯಲ್ಲಿ ಲಾಂಗು,ಮಚ್ಚು ಹಿಡಿದುಕೊಂಡುಬಂದು ಹಣಕ್ಕಾಗಿಪೀಡಿಸಿದ್ದಾರೆ. ಮಾರಕಆಯುಧಗಳನ್ನು ತೋರಿಸಿಬೆದರಿಸಿದ್ದಾರೆ. ಇದರಿಂದತಪ್ಪಿಸಿಕೊಳ್ಳಲು ದೊಡ್ಡಮಾರಪ್ಪಮುಂದಾಗುತ್ತಿದ್ದಂತೆ ಹಲ್ಲೆನಡೆಸಿದ್ದಾರೆ. ಗಾಯಾಳುವಿಗೆಸ್ಥಳೀಯ ಆಸ್ಪತ್ರೆಯಲ್ಲಿಚಿಕಿತ್ಸೆ ಕೊಡಿಸಲಾಯಿತು.

*ಸಿಸಿಕ್ಯಾಮೆರಾದಲ್ಲಿ ಸೆರೆ*
ಲಾಂಗು ಮಚ್ಚುತೋರಿಸಿ ಬೆದರಿಸಿಹಲ್ಲೆಗೈದಿರುವ ದೃಶ್ಯಗಳುಸೆರೆಯಾಗಿವೆ. ಸಾಮಾಜಿಕಜಾಲತಾಣದಲ್ಲಿ ವೈರಲ್ಆಗಿದ್ದು ಪೊಲೀಸ್ಸೂಕ್ತ ಕ್ರಮಕೈಗೊಂಡು ಅಪರಾಧಪ್ರಕರಣಗಳಿಗೆ ಕಡಿವಾಣಹಾಕಬೇಕು ಎಂದುಸ್ಥಳೀಯರು ಒತ್ತಾಯಿಸಿದ್ದಾರೆ.

*ಸುಲಿಗೆಪ್ರಕರಣಗಳ ಪುನರಾವರ್ತನೆ*
ನಂದಿ ಗಿರಿಧಾಮಪೊಲೀಸ್ ಠಾಣೆಯಮುಂಭಾಗದ ರಾಷ್ಟ್ರೀಯಹೆದ್ದಾರಿ (ಬೆಂಗಳೂರು-ಚಿಕ್ಕಬಳ್ಳಾಪುರಮಾರ್ಗ)ದಲ್ಲಿನಿರಂತರವಾಗಿ ಸುಲಿಗೆಪ್ರಕರಣಗಳು ವರದಿಯಾಗುತ್ತಿವೆ.ಕಾರನ್ನು ತಡೆದುಬೆಂಗಳೂರು ವ್ಯಕ್ತಿಯಬಳಿ ಹಣಸುಲಿಗೆ ಮಾಡಲಾಗಿತ್ತು.ಬಸ್ಸಿಗಾಗಿ ಕಾಯುತ್ತಿದ್ದಮಹಿಳೆಯ ಸರವನ್ನುಕಿಡಿಗೇಡಿಗಳು ಕಿತ್ತುಕೊಂಡುಹೋಗಿದ್ದರು. ಇನ್ನುಪೊಲೀಸ್ ಠಾಣೆಯವ್ಯಾಪ್ತಿಯಲ್ಲಿ ಸುಲಿಗೆಪ್ರಕರಣಗಳು ನಡೆಯುತ್ತಿದ್ದುಪೊಲೀಸ್ ಬೀಟ್ವ್ಯವಸ್ಥೆಯನ್ನು ಚುರುಕುಗೊಳಿಸಿ,ಅಪರಾಧ ಪ್ರಕರಣಗಳಿಗೆಕಡಿವಾಣ ಹಾಕಬೇಕುಎಂದು ಸ್ಥಳೀಯರುಒತ್ತಾಯಿಸಿದ್ದಾರೆ.‌