ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗಲಾಟೆ, ಶಾಸಕಪ್ರದೀಪ್ ಈಶ್ವರ್ ರತ್ತ ಚಪ್ಪಲಿ ತೂರಾಟಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದು ಬರೋಬ್ಬರಿ ೧೫೦ ಜನರನ್ನು ವಶಕ್ಕೆಪಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಆರೋಪಿಗಳವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ರ ಅಡಿಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಸಾರ್ವಜನಿಕ ನೌಕರರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧಅಪರಾಧಗಳಿಗೆ ಸೆಕ್ಷನ್ಗಳಡಿ ಪ್ರಕರಣದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 189(2) ಕಾನೂನು ಬಾಹಿರ ಗುಂಪುಗೂಡುವಿಕೆ, ಹಿಂಸಾಚಾರ, ಸರ್ಕಾರಕ್ಕೆ ಬೆದರಿಕೆ, ಸೆಕ್ಷನ್ 190 ನಡಿ ಸಾಮಾನ್ಯ ಉದ್ದೇಶದ ಈಡೇರಿಕೆಯಲ್ಲಿ ಅಪರಾಧ (ಗುಂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಆ ಅಪರಾಧಕ್ಕೆ ಸಮಾನವಾಗಿ ಹೊಣೆಗಾರರು), ಸೆಕ್ಷನ್ 191(2) ಗಲಭೆ, ಸೆಕ್ಷನ್ 132 ಸಾರ್ವಜನಿಕ ನೌಕರರ ಕರ್ತವ್ಯಕ್ಕೆ ಅಡ್ಡಿ, ಸೆಕ್ಷನ್ 351(3): ಕ್ರಿಮಿನಲ್ ಬೆದರಿಕೆ, ಸೆಕ್ಷನ್ 352 ನಡಿ ಉದ್ದೇಶಪೂರ್ವಕ ಅವಮಾನದ ಆರೋಪಗಳನ್ನುಹೊರಿಸಲಾಗಿದೆ. ಗಲಾಟೆ ಮಾಡಿದ ಪ್ರಕರಣದಲ್ಲಿ ಪೊಲೀಸರು ೧೫೦ ಜನರನ್ನು ಬಂಧಿಸಿ, ಕಾನೂನು ಪ್ರಕಾರಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಈಗಾಗಲೇ ಘಟನೆಯ ಸ್ಥಳದಲ್ಲಿನ ವಿಡಿಯೋದೃಶ್ಯಗಳ ಪರಿಶೀಲನೆ, ಆರೋಪಿಗಳ ಮಾಹಿತಿ ಸಂಗ್ರಹ, ಪತ್ತೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.