ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಿಜಿ ಕುಮಾರ್, ಪಿಎಸ್ಐ ರಮೇಶ್, ಮಹಿಳಾ ಪಿಎಸ್ಐ ಪದ್ಮಾ ಸೇರಿ ಮಹಿಳಾ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿದೆೆ.
- ಒಂಟಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ
- ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
- ಬಂಧಿತರ ಪೈಕಿ ಒಬ್ಬ ಮಹಿಳೆ ನಗರದ ನಿವಾಸಿ
ಚಿಂತಾಮಣಿ: ನಗರದ ಊಲವಾಡಿ ರಸ್ತೆಯ ಗಾಂಧಿನಗರ ಹೊರವಲಯ ಕರಿಯಪ್ಪಲ್ಲಿ ಸಮೀಪದ ಒಂಟಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬ ಮಹಿಳೆ ನಗರದ ನಿವಾಸಿಯಾಗಿದ್ದು, ಮತ್ತೊಬ್ಬಾಕೆ ಮಹಾರಾಷ್ಟ್ರದವರು. ಇಬ್ಬರು ಪುರುಷರು ತಾಲೂಕಿನ ಬುರುಡುಗುಂಟೆ, ಮಹಮದ್ಪುರ ಗ್ರಾಮದ ಯುವಕರು. ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಿಜಿ ಕುಮಾರ್, ಪಿಎಸ್ಐ ರಮೇಶ್, ಮಹಿಳಾ ಪಿಎಸ್ಐ ಪದ್ಮಾ ಸೇರಿ ಮಹಿಳಾ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿದೆೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.